ಹಾಡುಹಗಲೇ “ತನ್ನ ಸಾವಿಗಾಗಿ” ಕತ್ತು ಕೊಯ್ದುಕೊಂಡ ಹುಬ್ಬಳ್ಳಿ ಯುವಕ…

Exclusive
ಹುಬ್ಬಳ್ಳಿಯಲ್ಲಿ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನ.
ಹುಬ್ಬಳ್ಳಿ: ಯುವಕನೊಬ್ಬ ಕ್ಷುಲ್ಲಕ ವಿಚಾರಕ್ಕೇ ಬೇಸತ್ತು ತನ್ನ ಕುತ್ತಿಗೆಗೆ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ಈಗಷ್ಟೇ ನಡೆದಿದೆ.

ಗಿರಣಿಚಾಳದ ನಿರೂಪಾದಿ ಬಂಡಾರಿ ಎಂಬ ಯುವಕನೆ,ತನ್ನ ಕ್ಷುಲ್ಲಕ ವಿಚಾರಕ್ಕೇ ಬೇಸತ್ತು ತನ್ನ ಮನೆಯಲ್ಲಿ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ,ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮನೆಯ ಅಕ್ಕಪಕ್ಕದವರು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಉಪನಗರ ಠಾಣೆಯ ಪೊಲೀಸರು ಭೇಟಿಯನ್ನು ನೀಡಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ