“ಛತ್ರಿ ಬುದ್ಧಿಯ ಗಾಯತ್ರಿ”- ಬಂಧಿಸಿದಾಗ ಹೊರಬಿತ್ತು 250 ಗ್ರಾಂ ಚಿನ್ನ…!

ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣದ ಮುಂದಿನ ಹೊಟೇಲ್ ಬಳಿಯಲ್ಲಿ ಮೊಬೈಲ್ ಕಳ್ಳತನ ಮಾಡಿದ್ದರ ಬಗ್ಗೆ ಸಿಕ್ಕಿ ಬಿದ್ದಿದ್ದ ಬಾಂಬೆ ಮೂಲದ ಮಹಿಳೆಯಿಂದ ಬರೋಬ್ಬರಿ 250 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಲಿ ಸೆಟ್ಲಮೆಂಟ್ ನಿವಾಸಿಯಾಗಿದ್ದ ಗಾಯತ್ರಿ ಸಂದೀಪ ಗಾಯಕವಾಡ ಎಂಬಾಕೆ ಮನೆಗೆಲಸ ಮಾಡಿಕೊಂಡೇ ಸುಮಾರು 11 ಲಕ್ಷ 39ಸಾವಿರ ಮೌಲ್ಯದ ಚಿನ್ನ ಹಾಗೂ ಮೊಬೈಲ್ ನ್ನ ಕಳ್ಳತನ ಮಾಡಿದ್ದಳು.
ಗಾಯತ್ರಿಯನ್ನ ಬಂಧಿಸಿದ ನಂತರ ಆಕೆಯ ವೃತ್ತಾಂತ ಗೊತ್ತಾಗಿದ್ದು, ಅವಳಿನಗರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಳ್ಳತನದ ವಸ್ತುಗಳು ಮಹಿಳೆಯಿಂದ ಪತ್ತೆಯಾಗಿದ್ದು ಮೊದಲ ಬಾರಿಯಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರವಿಚಂದ್ರ ಬಡಫಕ್ಕೀರಪ್ಪನವರ ನೇತೃತ್ವದಲ್ಲಿ ಪಿಎಸ್ಐ ಅಶೋಕ ಪಿಎಸ್ಪಿ, ಪ್ರೋಬೆಷನರಿ ಪಿಎಸ್ಐ ಯು.ಎಂ.ಪಾಟೀಲ, ಎಎಸ್ಐ ಎಸ್.ವಾಯ್.ಜಂತ್ಲಿ, ಸಿಬ್ಬಂದಿಗಳಾದ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಮಂಜುನಾಥ ಹಾಲವರ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಜಗದೀಶ ಹಟ್ಟಿ, ಕುಮಾರ ಬಾಗವಾಡಮಠ, ಮಾಬುಸಾಬ ಮುಲ್ಲಾ, ಆರೂಢ ಕರೆಣ್ಣನವರ, ಮಾರ್ಗರೇಟ್ ಅನಂತಪುರ, ಸಂಗೀತಾ ಗೌಳಿ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದಾರೆ.