ದೊಡ್ಡ ದುರಂತ ತಪ್ಪಿಸಿದ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು…!

ಹುಬ್ಬಳ್ಳಿ: ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ನಡೆಯಬೇಕಾಗಿದ್ದ ದುರಂತವೊಂದನ್ನ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಹಾಗೂ ಸಂಚಾರಿ ಠಾಣೆ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದೋಬಸ್ತ್ ನಡೆಸುತ್ತಿದ್ದ ವೇಳೆಯಲ್ಲಿ ಲಾರಿಯೊಂದು ವೇಗವಾಗಿ ಹೊರಟ ಸಮಯದಲ್ಲಿ ಕೇಬಲ್ ಗೆ ಸಿಲುಕಿಕೊಂಡಿದೆ. ತಕ್ಷಣವೇ ಓಡಿ ಪೊಲೀಸರು ಲಾರಿಯನ್ನ ನಿಲ್ಲಿಸುವಂತೆ ಕೋರಿದ್ದಾರೆ. ಇದರಿಂದ ಲಾರಿ ಅಲ್ಲೇ ನಿಂತಿದೆ.
ಆಕಸ್ಮಿಕವಾಗಿ ಇದನ್ನ ಪೊಲೀಸರು ನೋಡದೇ ಇದ್ದರೇ, ಕೇಬಲ್ ವಿದ್ಯುತ್ ತಂತಿಗೆ ತಗುಲಿ ದೊಡ್ಡದೊಂದು ದುರಂತವೇ ನಡೆದುಕ ಹೋಗುತ್ತಿತ್ತು. ರಸ್ತೆಯಲ್ಲಿ ಪೊಲೀಸರೇ ನಿಂತು ಕೇಬಲ್ ತೆಗೆದು ಹಾಕಿ, ಲಾರಿಯಿಂದ ಸಾಗ ಹಾಕಿದರು.
ಉಪನಗರ ಠಾಣೆಯ ಪಿಎಸ್ಐ ಆರ್.ಎಂ.ಕಾಲವಾಡ, ಉದಯ ಗಸ್ತಿ, ಪಿ.ಬಿ.ಕಾಟೇ ಹಾಗೂ ಪ್ರಕಾಶ ಸರಕಾರ ಉತ್ತಮ ಕಾರ್ಯವನ್ನ ಮಾಡಿದ್ದು, ಸ್ಮರಣೀಯ.