ಹುಬ್ಬಳ್ಳಿಯಲ್ಲಿ ಚಾಕು ಇರಿತ…!
ಹುಬ್ಬಳ್ಳಿ: ನಗರದ ನೂರಾನಿ ಪ್ಲಾಟಿನಲ್ಲಿ ಹಿಂಬದಿಯಿಂದ ಬಂದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಯುವಕನನ್ನ ಕಿಮ್ಸಗೆ ಚಿಕಿತ್ಸೆಗಾಗಿ ದಾಖಲು ಮಾಡಿದ ಘಟನೆ ನಡೆದಿದೆ.
ಸಾಗರ ಹುಲಕೋಟಿ ಎಂಬ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಸಾಗರ ರಸ್ತೆಯಲ್ಲಿ ಹೊರಳಾಡುತ್ತ ಬಿದ್ದಾಗ, ಗೆಳೆಯರು ಆತನನ್ನ ಕರೆದುಕೊಂಡು ಕಿಮ್ಸಗೆ ದಾಖಲು ಮಾಡಿದ್ದಾರೆ.
ಸಾಗರನಿಗೆ ಹಿಂದಿನಿಂದ ಹೊಡೆದಿದ್ದರಿಂದ ಯಾರೂ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿಲ್ಲವಾದರೂ, ಹಳೆಯ ವೈಷಮ್ಯವೇ ಘಟನೆಗೆ ಕಾರಣವೆಂದು ಹೇಳಲಾಗಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆಯನ್ನ ನಡೆಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.