ಕೇಶ್ವಾಪುರ ಜ್ಯುವೇಲರಿ ಕಳ್ಳತನ- ಸಿಕ್ಕ ಆರೋಪಿ ತಪ್ಪಿಸಿಕೊಳ್ಳೋ ಯತ್ನ- ಗುಂಡು ಹಾರಿಸಿದ ಮಹಿಳಾ ಪಿಎಸ್ಐ ಕವಿತಾ…!!!

ಹುಬ್ಬಳ್ಳಿ: ಕೇಶ್ವಾಪುರದ ಭುವನೇಶ್ವರಿ ಜ್ಯುವೇಲರಿ ಕಳ್ಳತನ ಪ್ರಕರಣದ ಅಂತರ್‌ರಾಜ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಇತರೇ ಆರೋಪಿಗಳನ್ನ ಬಂಧನ ಮಾಡಲು ಹೊರಟ ಸಮಯದಲ್ಲಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಮಹಿಳಾ ಪಿಎಸ್ಐವೊಬ್ಬರು ಎರಡು ಸುತ್ತು ಗುಂಡು ಹಾರಿಸಿರುವ ಪ್ರಕರಣ ಗಾಮನಗಟ್ಟಿಯ ಬಳಿ ಸಂಭವಿಸಿದೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಬೆ ಮೂಲದ ಫರ್ಹಾನ್ ಶೇಖ ಎಂಬ ಆರೋಪಿ, ಮಹಿಳಾ ಪೇದೆ ಸುಜಾತಾ ಹಾಗೂ ಪೇದೆ ಮಹೇಶ ಎಂಬುವವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ, ಮಹಿಳಾ ಪಿಎಸ್ಐ ಕವಿತಾ ಮಾಡಗ್ಯಾಳ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಪೇದೆಗಳು ಹಾಗೂ ಆರೋಪಿಯನ್ನ ಪೊಲೀಸರು ಕಿಮ್ಸಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪ್ರಕರಣ ನವನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಬೇಕಿದೆ.