“ಧೂಳ್” ಮುಕ್ತ ಮಾಡಿ: “ಸಚಿವ ಲಾಡ್”ರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ “ಜನತಾದರ್ಶನ” ಪತ್ರ…

ಹುಬ್ಬಳ್ಳಿ: ಕಳೆದ ಎಂಟು ತಿಂಗಳಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಯಾರೂ ಅನ್ನುವುದೇ ಗೊತ್ತಾಗುತ್ತಿಲ್ಲ. ನೀವಾದರೂ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ ಸನದಿ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರಿಗೆ ಜನತಾದರ್ಶನದ ಮೂಲಕ ಪತ್ರ ಬರೆದಿದ್ದಾರೆ.
ಪತ್ರದ ಸಂಪೂರ್ಣ ಸಾರಾಂಶ ಇಲ್ಲಿದೆ ನೋಡಿ…
ಶಾಕೀರ ಸನದಿ ಅವರು ಸಾರ್ವಜನಿಕ ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಪತ್ರವನ್ನ ಬರೆದಿದ್ದಾರೆ. ಪಿಡಬ್ಲ್ಯೂಡಿ ಮತ್ತು ಸ್ಮಾರ್ಟ್ ಸಿಟಿಯವರ ಗೊಂದಲದ ಬಗ್ಗೆಯೂ ವಿವರಣೆ ನೀಡಿ, ಸಚಿವರೇ ಮುಂದೆ ನಿಂತು ತೊಂದರೆ ನಿವಾರಿಸಿ ಎಂದಿದ್ದಾರೆ.