ಹುಬ್ಬಳ್ಳಿಯಲ್ಲಿ ಹಾಡುಹಗಲೇ 26 ಲಕ್ಷ ರೂಪಾಯಿ ಲೂಟಿ…!!!

ಹುಬ್ಬಳ್ಳಿ: ಕಾರ್ಮಿಕರನ್ನ ಕೆಲಸಕ್ಕೆ ಒದಗಿಸುವ ನೆಪ ಮಾಡಿ 26 ಲಕ್ಷ ರೂಪಾಯಿಗಳನ್ನ ಕೊಳ್ಳೆ ಹೊಡೆದು ಪರಾರಿಯಾದ ಘಟನೆ ಹೊಸ್ ಬಸ್ ನಿಲ್ದಾಣದ ಬಳಿಯಿರುವ ಸೆಕ್ಯೂರ್ ಆಸ್ಪತ್ರೆಯ ಬಳಿ ಸಂಭವಿಸಿದೆ.
ಪೂನಾ ಮೂಲದ ಗುತ್ತಿಗೆದಾರ ಹಾಸನದಲ್ಲಿ ಕೆಲಸ ಮಾಡಲು ಕಾರ್ಮಿಕರ ಅವಶ್ಯಕತೆಯಿತ್ತು. ಆ ಕಾರಣಕ್ಕಾಗಿ ಹುಬ್ಬಳ್ಳಿ ಮೂಲದವರನ್ನ ಸಂಪರ್ಕಿಸಿ, ಅವರಿಗೆ ಅಡ್ವಾನ್ಸ್ ಹಣ ಕೊಡಲು ಕಾರಿನಲ್ಲಿ ಬಂದಿದ್ದ.
ಗುತ್ತಿಗೆದಾರನ ಬಳಿ ಹಣ ಇರುವುದನ್ನ ಖಚಿತಪಡಿಸಿಕೊಂಡ ಕಾರ್ಮಿಕರ ಸೋಗಿನಲ್ಲಿದ್ದ ವಂಚಕರು 26 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ. ಸೋಜಿಗವೆಂದರೇ, ಗುತ್ತಿಗೆದಾರನಿಗೆ ಅವರ ಮೊಬೈಲ್ ನಂಬರ ಹೊರತು ಪಡಿಸಿದರೇ ಯಾವುದೇ ಮಾಹಿತಿಯಿಲ್ಲ ಎನ್ನಲಾಗಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಆಗುಂತಕರ ಮಾಹಿತಿ ಕಲೆ ಹಾಕುತ್ತಿದ್ದಾರೆ.