ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಂದ ದರೋಡೆಕೋರರ ಬಂಧನ….!

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದ ಬಳಿ ಬೈಕಿನಲ್ಲಿ ಹೋಗಿ ಸಾರ್ವಜನಿಕರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನ ಹುಬ್ಬಳ್ಳಿಯ ಸೆಟ್ಲಮೆಂಟ್ ಗಂಗಾಧರನಗರದ ಸಿದ್ಧಾರ್ಥ ಅಲಿಯಾಸ್ ಕಿರಣ ಗುರುನಾಥ ನವಲಗುಂದ, ಶ್ರೀನಿವಾಸ ಅಲಿಯಾಸ್ ಶಿನ್ಯಾ ತಿರುಪತಿ ವೀರಾಪುರ ಹಾಗೂ ಸುಧಾಕರ ಅಲಿಯಾಸ್ ಸುಧಾ ಸುಭಾಷ ಗಬ್ಬೂರ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಬೈಕ್, ಬೆದರಿಸಲು ಬಳಕೆ ಮಾಡುತ್ತಿದ್ದ ಏರ್ ಗನ್, ಚಾಕುವನ್ನ ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಆರೋಪಿಗಳ ಬಂಧನವಾಗಿದೆ.