Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ರೌಡಿಗೆ ಶೂಟ್”- ತಪ್ಪಿಸಿಕೊಂಡ್ರೇ ಹುಷಾರ್…! Exclusive Videos

Spread the love

ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಗುಂಡೇಟು; ರೌಡಿ ಷೀಟರ್ ಎದೆಯಲ್ಲಿ ನಡುಕು ಹುಟ್ಟಿಸಿದ ಖಾಕಿ ನಡೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರವಿವಾರ ನಡೆದ ರೌಡಿ ಶೀಟರ್ ಗ್ಯಾಂಗ್ ವಿಚಾರಕ್ಕೇ ಸಂಬಂಧಿಸಿದಂತೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟು ಬಂಧನ ಮಾಡಿದ್ದಾರೆ.

Exclusive video…

ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ತಡರಾತ್ರಿ ರೌಡಿ ಶೀಟಿರ್ ಗಳ ನಡುವೆ ಗ್ಯಾಂಗ್ ವಾರ್ ಸಂಭವಿಸಿದ ಪರಿಣಾಮ ಜಾವೂರ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ ಕೂಡಲೇ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಪ್ರಕರಣವನ್ನು ದಾಖಲು ಮಾಡಿಕೊಂಡ ಕಸಬಾಪೇಟ ಠಾಣೆಯ ಪೊಲೀಸರು ತನಿಖೆಗಿಳಿದಾಗ ಇದರಲ್ಲಿ ರೌಡಿ ಶೀಟರ್ ಅಪ್ತಾಬ್ ಪಾತ್ರ ಇರೋದು ಗೊತ್ತಾಗಿ ಬುಡರಸಿಂಗಿ ರಸ್ತೆಯಲ್ಲಿ ಈತನ ಬಂಧನ ಮಾಡಲು ಹೋದಾಗ ಈತ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಕೂಡಲೇ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಅಪ್ತಾಬ್ ಕಾಲಿಗೆ ಗುಂಡೇಟು ಕೊಟ್ಟು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಗಾಯಾಳು ಪೊಲೀಸ್ ಸಿಬ್ಬಂದಿ ರಾಠೋಡ ಹಾಗೂ ಪಾಲಯ್ಯ ಎಂಬವರಿಗೆ ಗಾಯವಾಗಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಇನ್ನು ಗುಂಡೇಟು ತಿಂದಿರುವ ರೌಡಿ ಶೀಟರ್ ವಿರುದ್ಧ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ತಾಬ್ ವಿರುದ್ಧ ಕೊಲೆ ಪ್ರಕರಣ ಕೂಡಾ ದಾಖಲಾಗಿತ್ತು.ಸದ್ಯ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿರೋದು ಇದೀಗ ಅವಳಿ ನಗರದ ರೌಡಿ ಶೀಟರ್ ಗಳಿಗೆ ಮತ್ತಸ್ಟು ನಡುಕ ಉಂಟು ಮಾಡಿದೆ


Spread the love

Leave a Reply

Your email address will not be published. Required fields are marked *