ಹುಬ್ಬಳ್ಳಿಯಲ್ಲಿ ಹಾಡುಹಗಲೇ ರೌಡಿಸಂ: ತಾಯಿ-ಮಗನಿಗೆ ಥಳಿತ: ಎಕ್ಸಕ್ಲೂಸಿವ್ ವೀಡಿಯೋ
ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯಾ ಡಾಬಾದಲ್ಲಿ ಹಾಡುಹಗಲೇ ತಾಯಿ ಮತ್ತು ಮಗನ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಘಟನೆ ಈಗಷ್ಟೇ ನಡೆದಿದ್ದು, ತೀವ್ರ ರಕ್ತಸ್ರಾವವಾಗುತ್ತಿರುವ ಮಗನನ್ನ ಮತ್ತು ತಾಯಿಯನ್ನ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.
ಪ್ರಿಯಾ ಡಾಬಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಸುಗಲ್ ಗ್ರಾಮದ ಇಂದಿರಮ್ಮ ಮತ್ತು ಆಕೆಯ ಮಗ ರವಿಯನ್ನ ಡಾಬಾದ ಮುಂಭಾಗದಲ್ಲಿ ಪಾನ್ ಶಾಪ್ ನಡೆಸುತ್ತಿದ್ದ ಮೊರಬ ಗ್ರಾಮ ಸತೀಶ, ಆನಂದ ಮತ್ತು ಸುರೇಶ ಎಂಬುವವರನ್ನ ಕರೆದು ಹಿಗ್ಗಾಮುಗ್ಗಾ ಥಳಿಸಿದ್ದು, ಇಬ್ಬರಿಗೆ ಗಾಯವಾಗಿದೆ.
ಆಕ್ಸಫರ್ಡ್ ಕಾಲೇಜಿನ ಸಮೀಪವಿರುವ ಡಾಬಾದೊಳಗೆ ಶಟರ್ಸ್ ಹಾಕಿ ಹೊಡೆಯಲಾಗಿದ್ದು, ರವಿಯ ತಲೆ ಒಡೆದು ರಕ್ತಸ್ರಾವವಾಗುತ್ತಿತ್ತು. ನವಲಗುಂದ ತಾಲೂಕಿನ ಮೊರಬ ಗ್ರಾಮದ ಯುವಕನಿಂದಲೇ ಈ ರಾದ್ಧಾಂತ ನಡೆದಿದೆ ಎಂದು ಹೇಳಲಾಗಿದ್ದು, ಸಾರ್ವಜನಿಕರ ಎದುರಿಗೆ ದಾದಾಗಿರಿ ಮಾಡುತ್ತಿರುವುದು ಕಂಡು ಬಂದಿತು.
ಕೇಶ್ವಾಪುರ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರು ಅದೇನು ಮಾಡುತ್ತಿದ್ದಾರೋ ತಿಳಿಯದಾಗಿದೆ. ಡಾಬಾದ ಬಳಿ ಘಟನೆ ನಡೆದರೂ ಇನ್ನೂವರೆಗೂ ಇಲ್ಲಿಗೆ ಧಾವಿಸದೇ ಇರುವುದು ಅವರ ಕಾರ್ಯಕ್ಷಮತೆಯನ್ನ ಬಿಂಬಿಸುತ್ತೆ.
ಹಾಡುಹಗಲೇ ಹೀಗೆ ರೌಡಿಸಂ ಮಾಡುವ ಪಡೆಯನ್ನ ಪೊಲೀಸರು ಅದ್ಯಾವಾಗ ಪಾಠ ಕಲಿಸುತ್ತಾರೋ..?