“ಧುಮ್-ಧಾಮ್” ಮದುವೆಗಾಗಿ ದರೋಡೆಗಿಳಿದಿದ್ದ ಪ್ರವೀಣಕುಮಾರ S/O ಅಪ್ಪಾಸಾಹೇಬ ಪಾಟೀಲ….!
1 min readಹುಬ್ಬಳ್ಳಿ: ವಾಣಿಜ್ಯನಗರದ ಪ್ರಮುಖವಾದ ಕೊಪ್ಪಿಕರ ರಸ್ತೆಯಲ್ಲಿನ ಬ್ಯಾಂಕಿನ ದರೋಡೆ ಮಾಡಲು ಹುನ್ನಾರ ಹಾಕಿ, ಸಿಕ್ಕಿ ಬಿದ್ದ ಪ್ರವೀಣಕುಮಾರ ಎಂತವನು ಎಂಬುದನ್ನ ನೋಡಲು ಹೋದಾಗ ಹಲವು ಅಚ್ಚರಿಗಳು ಕಾಣಸಿಗುತ್ತಿವೆ.
ಮೂಲತಃ ವಿಜಯಪುರದ ಪ್ರವೀಣಕುಮಾರ ಅಪ್ಪಾಸಾಹೇಬ ಪಾಟೀಲ, ಸೌಮ್ಯ ಸ್ವಭಾವದ ಯುವಕನಂತೆ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡಿದ್ದನಂತೆ. ಅಷ್ಟೇ ಅಲ್ಲ, ತನ್ನ ತಲೆಗೂದಲು ಹೋದರೂ, ಅದಕ್ಕೆ ವಿಗ್ ಅಥವಾ ಚಿಕಿತ್ಸೆ ಪಡೆಯಲು ಕೂಡಾ ‘ಒಲ್ಲೆ’ ಅಂದಿದ್ದನಂತೆ. ನಾನು ಹ್ಯಾಗೇ ಇದ್ದೇನೋ ಹಾಗೇ ಒಪ್ಪಿಕೊಳ್ಳುವ ಹುಡುಗಿಯನ್ನ ಮದುವೆಯಾಗುತ್ತೇನೆ ಎಂದುಕೊಂಡಿದ್ದನಂತೆ.
ಇಂತಹ ಪ್ರವೀಣಕುಮಾರನನ್ನ ಇಷ್ಟಪಡುವ ಹುಡುಗಿ ಸಿಕ್ಕು ಮದುವೆಯೂ ಫಿಕ್ಸ್ ಆಗಿದೆ. ಆದರೆ, ಪ್ರವೀಣಕುಮಾರನಿಗೊಂದು ಕನಸಿತ್ತಂತೆ, ಅದೇ ಈತ ಜೈಲಿಗೆ ಹೋಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ತಾನು ಸಾಧಾರಣ ಕುಟುಂಬದಿಂದ ಬಂದಿದ್ದರೂ ಮದುವೆಯನ್ನ ಮಾತ್ರ ದುಮ್-ಧಾಮ್ ಎಂದು ಮಾಡಿಕೋಬೇಕು ಎಂದುಕೊಂಡಿದ್ದನಂತೆ. ಅದೇ ಕಾರಣಕ್ಕೆ ಹೀಗೆ ಹಾಡುಹಗಲೇ ದರೋಡೆಗೆ ಇಳಿದು ಜೈಲು ಪಾಲಾಗಿದ್ದಾನೆ. ಪ್ರವೀಣನನ್ನ ಹ್ಯಾಗೇ ನೋಡಿದ್ದಳೋ ಹಾಗೇ ಒಪ್ಪಿಕೊಂಡಿದ್ದ, ಯುವತಿಯೀಗ ಕಣ್ಣೀರಿಡುವಂತಾಗಿದೆ.