ಹುಬ್ಬಳ್ಳಿಯಲ್ಲಿ ಅಕ್ರಮ ಪಡಿತರ ಅಕ್ಕಿ ಕುಳಗಳ ಬಂಧನ
1 min readಹುಬ್ಬಳ್ಳಿ: ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಅಂಗಡಿಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿರುವ ಘಟನೆ ಮಾರುತಿನಗರದಲ್ಲಿ ನಡೆದಿದೆ.
ದಾಳಿಯ ಸಮಯದಲ್ಲಿ 2ಲಕ್ಷ 32 ಸಾವಿರ ರೂಪಾಯಿ ಮೌಲ್ಯದ 105 ಕ್ವಿಂಟಾಲ್ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದು, ಹಳೇಹುಬ್ಬಳ್ಳಿಯ ಎಸ್.ಎಂ.ಕೃಷ್ಣನಗರದ ಮೆಹಬೂಬ ಸಯ್ಯದ, ಮಹ್ಮದಆರೀಫ ಪೀರಅಹ್ಮದ ಐನಾಪುರೆ ಹಾಗೂ ಈಶ್ವರನಗರದ ಮೆಹಬೂಬಸಾಬ ಬೇಪಾರಿ ಎಂಬುವವರನ್ನ ಬಂಧನ ಮಾಡಲಾಗಿದೆ.
ಆರೋಪಿಗಳಿಂದ ಎರಡು ಮಿಷನ್, ಆಟೋರಿಕ್ಷಾಗಳನ್ನ ವಶಕ್ಕೆ ಪಡೆಯಲಾಗಿದೆ. ಮಾರುತಿನಗರದಲ್ಲಿ ಆರೋಪಿಯೋರ್ವನ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ ಸಮಯದಲ್ಲಿ 213 ಅಕ್ಕಿ ಚೀಲಗಳು ಸಿಕ್ಕಿವೆ. ಈ ಕುರಿತು ಪಾಲಿಕೆ ವಲಯ ಕಚೇರಿ-1ರ ಆಹಾರ ನಿರೀಕ್ಷಕ ಗಣೇಶ ಎರೇಸಿಮಿ ದೂರು ನೀಡಿದ್ದರು.
ಕಾರ್ಯಾಚರಣೆಯಲ್ಲಿ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಎಸ್.ಕೆ.ಹೊಳೆಣ್ಣನವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.