ಹುಬ್ಬಳ್ಳಿ “ದೊಂಬಿ, ಬೆಂಕಿ”ಯಿಟ್ಟ ಪ್ರಕರಣ: ಆರೋಪಿ ಬಂಧಿಸಿದ ಪೊಲೀಸರ ವಿರುದ್ಧ “ಆರ್.ಅಶೋಕ” ನೇತೃತ್ವದಲ್ಲಿ ನಾಳೆ ಬೃಹತ್ ಹೋರಾಟ…!!!
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ 1992 ರಲ್ಲಿ ನಡೆದ ಪ್ರಕರಣವೊಂದರ ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿರುವ ಪ್ರಕರಣವೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಅಖಾಡಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನಾಳೆ ಎಂಟ್ರಿ ಕೊಡುತ್ತಿದ್ದಾರೆ.
ಶ್ರೀಕಾಂತ ಪೂಜಾರಿಯ ವಿರುದ್ಧ ವಿವಿಧ ಠಾಣೆಗಳಲ್ಲಿ 14 ಪ್ರಕರಣಗಳಿದ್ದು, ರಾಮಜನ್ಮಭೂಮಿ ಹೋರಾಟಕ್ಕೆ ಸಂಬಂಧಿಸಿದ ಕೇಸಿನಲ್ಲಿ ಅರೆಸ್ಟ್ ಮಾಡಿರುವುದು ಚರ್ಚಗೆ ಕಾರಣವಾಗಿದೆ.
ಯಾವ ಯಾವ ಠಾಣೆಯಲ್ಲಿ ಯಾವ್ಯಾವ ಕೇಸ್ ಇದೆ ಎಂಬ ವಿವರ ಇಲ್ಲಿದೆ ನೋಡಿ…
ಪೊಲೀಸ್ ಅಧಿಕಾರಿಗಳು ಸೂರ್ಯಕಾಂತಿಯಿದ್ದ ಹಾಗೇ ಅಧಿಕಾರ ಎಲ್ಲಿ ಇರತ್ತೋ ಅಲ್ಲಿ ತಿರುಗುತ್ತಾರೆ. ಶ್ರೀಕಾಂತ ಪೂಜಾರಿ ಮೇಲೆ 14 ಕೇಸ್ ಇರುವುದು ಈಗೇಕೆ ಚರ್ಚೆಗೆ ಬಂದಿದೆ ಎಂದು ಪ್ರಲ್ಹಾದ ಹೇಳಿದ್ದಾರೆ.
ಈ ನಡುವೆ ನಾಳೆಯ ಹೋರಾಟದಲ್ಲಿ ಕಾರ್ಯಕರ್ತರು ಭಾಗಿಯಾಗಲಿ ಎಂದು ಬಿಜೆಪಿಯ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಮನವಿ ವಿವರ…
ಬೃಹತ್ ಪ್ರತಿಭಟನೆ
*ಶ್ರೀರಾಮ್ ಮಂದಿರ ಹೋರಾಟಗಾರರ* (ಕರಸೇವಕರ) ಮೇಲೆ ಕೇಸ್ ಮಾಡಿದ ಕಾಂಗ್ರೇಸ್ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆಯನ್ನು *ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಮಾನ್ಯ ಶ್ರೀ ಆರ್.ಅಶೋಕ ರವರ* ನೇತೃತ್ವದಲ್ಲಿ *ದಿನಾಂಕ : 03-01-2024 ಬುಧವಾರ* ಬೆಳಿಗ್ಗೆ 11 ಗಂಟೆಗೆ *ನಗರ ಪೋಲಿಸ್ ಠಾಣೆ ಎದುರುಗಡೆ, ದುರ್ಗದಬೈಲ್ ಹತ್ತಿರ(ಮರಾಠ ಗಲ್ಲಿ)* ನಡೆಸಲಾಗುವುದು.
ಆದ್ದರಿಂದ ಪಕ್ಷದ ಎಲ್ಲ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ..
ಬಸವರಾಜ ಕುಂದಗೋಳಮಠ
ಜಿಲ್ಲಾಧ್ಯಕ್ಷರು
ಸದಾನಂದ ಚಿಂತಾಮಣಿ
ಮಾಲತೇಶ ಶ್ಯಾಗೋಟಿ
ಶಿವಾನಂದ ಗುಂಡಗೋವಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
#ಧಾರವಾಡಗ್ರಾಮಾಂತರಜಿಲ್ಲೆ.