Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲೊಂದು ಹೇಯ ಕೃತ್ಯ: ‘3’ ತಿಂಗಳ ಹಿಂದೆ ಮದುವೆಯಾಗಿದ್ದ ಕಿರಾತಕನಿಂದ ‘3’ ವರ್ಷದ ಬಾಲೆ ಮೇಲೆ ಅತ್ಯಾಚಾರ….!

Spread the love

ಹುಬ್ಬಳ್ಳಿ: ನಗರದ ಪ್ರಮುಖ ಪ್ರದೇಶವೊಂದರಲ್ಲಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಕಿರಾತಕನೋರ್ವ ಮೂರು ವರ್ಷದ ಬಾಲೆಯನ್ನ ಅತ್ಯಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

27 ವರ್ಷದ ರಮೇಶಗೌಡ ಯಲ್ಲಪ್ಪಗೌಡ ಪಾಟೀಲ ಎಂಬಾತನೇ ಇಂತಹ ಕೃತ್ಯ ಮಾಡಿದ್ದು, ಬಾಲಕಿಯನ್ನ ಹತ್ಯೆ ಮಾಡುವ ಯತ್ನವನ್ನೂ ಮಾಡಿದ್ದನೆಂದು ಹೇಳಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧನ ಮಾಡಿದ್ದಾರೆ.

ತನ್ನ ಪಕ್ಕದ ಮನೆಯ ಬಾಲಕಿಯನ್ನ ಕರೆದುಕೊಂಡು ಹೋಗಿ ಅಸಹ್ಯವಾಗಿ ವರ್ತಿಸಿದ್ದಾನೆ. ಇದರಿಂದ ಗಾಬರಿಯಾದ ಮಗು ಚೀರಿಕೊಂಡಿದ್ದು, ಪಕ್ಕದ ಮನೆಯವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯನ್ನ ಪೊಲೀಸರು ಬಂಧಿಸಿ, ವೈಧ್ಯಕೀಯ ತಪಾಸಣೆಯನ್ನ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ. ವಾಣಿಜ್ಯನಗರದಲ್ಲಿ ನಡೆದ ಹೇಯ ಕೃತ್ಯಯಿದಾಗಿದೆ.


Spread the love

Leave a Reply

Your email address will not be published. Required fields are marked *