ಶಿರಾದ ಬಳಿ ಅಪಘಾತ- ಹುಬ್ಬಳ್ಳಿಯ ಪ್ರಮುಖ ರಮೇಶ ಶಹಾಬಾದ್ ಇನ್ನಿಲ್ಲ…
ಶಿರಾ: ಬೆಂಗಳೂರಿನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಅಪಘಾತವಾದ ಪರಿಣಾಮ ಹುಬ್ಬಳ್ಳಿಯ ಉದ್ಯಮಿ ರಮೇಶ ಶಹಾಬಾದ್ ಸಾವಿಗೀಡಾದ ದುರ್ಘಟನೆ ಸಂಭವಿಸಿದೆ.
ರಮೇಶ ಶಹಾಬಾದ್ ಅವರ ಸಾವಿನ ಸುದ್ದಿ ಹುಬ್ಬಳ್ಳಿಯ ಹಲವರಲ್ಲಿ ತೀವ್ರ ನೋವನ್ನುಂಟು ಮಾಡಿದೆ. ಅವರ ಗೆಳೆಯರ ಬಳಗವಂತೂ ಕಣ್ಣೀರಿನಲ್ಲಿ ನೆನೆದಿದೆ.
ರಮೇಶ ಶಹಾಬಾದ್ ಅವರ ಅಂತಿಮ ಸಂಸ್ಕಾರವು ಕೇಶ್ವಾಪುರದ ಮುಕ್ತಿಧಾಮದಲ್ಲಿ ನಡೆಯಲಿದೆ. ರಮೇಶ ಅವರ ನಿವಾಸದಿಂದ 11ಗಂಟೆಗೆ ಅಂತಿಮಯಾತ್ರೆ ನಡೆಯಲಿದೆ.
ಸಂತಾಪ: ರಮೇಶ ಶಹಾಬಾದ್ ಅವರ ನಿಧನಕ್ಕೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ತೀವ್ರ ಸಂತಾಪ ಸೂಚಿಸಿ, ಭಗವಂತ ರಮೇಶ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ.