ಹುಬ್ಬಳ್ಳಿ ರೇಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹೆಸರು: ಕೇಂದ್ರದ ಅಧಿಕೃತ ಆದೇಶ

ಹುಬ್ಬಳ್ಳಿ: ಬಹುದಿನಗಳಿಂದ ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಹೆಸರಿನ್ನಿಡಬೇಕೆಂಬ ಬೇಡಿಕೆಯನ್ನ ಕೇಂದ್ರ ಸರಕಾರ ಪುರಸ್ಕರಿಸಿ, ರೇಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೇಲ್ವೆ ನಿಲ್ದಾಣ ಎಂಬ ಆದೇಶವನ್ನ ಹೊರ ಹಾಕಿದೆ.
ನೈರುತ್ಯ ರೇಲ್ವೆ ವಲಯಕ್ಕಾಗಿ ನಡೆದ ಹೋರಾಟದ ನಂತರ ರೇಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಹೆಸರು ಇಡಬೇಕೆಂದು ದಶಕಗಳಿಂದಲೂ ಮಹೇಂದ್ರ ಸಿಂಘಿ ಹೋರಾಟ ನಡೆಸುತ್ತ ಬಂದಿದ್ದರು. ಉತ್ತರ ಕರ್ನಾಟಕದ ಭಾವೈಕ್ಯತೆಯ ಜಾಗದ ಹರಿಕಾರನ ಹೆಸರು ಹಾಕಿಸಬೇಕೆಂದು ಪಣತೊಟ್ಟಂತೆ ನಡೆದುಕೊಂಡಿದ್ದರು.
ಇದಾದ ನಂತರ ಹಲವು ಸಂಘಟನೆಗಳು ರೇಲ್ವೆ ನಿಲ್ದಾಣಕ್ಕೆ ಶ್ರೀ ಆರೂಢರ ಹೆಸರನ್ನಿಟ್ಟು ಕೀರ್ತಿಯನ್ನ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಕಳೆದ 4ರಂದೇ ಅಧಿಕೃತವಾದ ಆದೇಶವನ್ನ ಕೇಂದ್ರ ಸರಕಾರ ಹೊರಡಿಸಿದೆ. ಇನ್ನೂ ಮುಂದೆ ಹುಬ್ಬಳ್ಳಿ ರೇಲ್ವೆ ನಿಲ್ದಾಣ ಎಂಬ ಶಬ್ದ ರೇಲ್ವೆ ನಿಲ್ದಾಣದಲ್ಲಿ ಕೇಳಿಸಲ್ಲ, ಬದಲಿಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೇಲ್ವೆ ನಿಲ್ದಾಣ ಹುಬ್ಬಳ್ಳಿ ಶಬ್ಧ ಕೇಳಲಿದೆ.
ಕೇಂದ್ರದ ಬಿಜೆಪಿ ಸರಕಾರ ಇಂತಹದೊಂದು ಮಹತ್ವದ ನಿರ್ಧಾರವನ್ನ ತೆಗೆದುಕೊಂಡು ಲಕ್ಷಾಂತರ ಭಕ್ತರ ಬೇಡಿಕೆಯನ್ನ ಈಡೇರಿಸಿದಂತಾಗಿದೆ.