ಹುಬ್ಬಳ್ಳಿ ಬಂದ್: ‘ಬಂದವ’ರ‌್ಯಾರು- ‘ಬರದವ’ರ‌್ಯಾರು
ಹುಬ್ಬಳ್ಳಿ: ರೈತ ವಿರೋಧಿ ನೀತಿಯನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ನಿನ್ನೆ ಮಾತಾಡಿದವರಲ್ಲಿ ಪ್ರಮುಖರು ಬೆಳಿಗ್ಗೆ ಒಂಬತ್ತೂವರೆಯಾದರೂ ಪ್ರತಿಭಟನೆಯಲ್ಲಿ ಕಾಣದೇ ಇರುವುದು ಸೋಜಿಗ ಮೂಡಿಸುತ್ತಿದೆ.
ಕಾರ್ಮಿಕ ಸಂಘಟನೆಯ ಮಹೇಶ ಪತ್ತಾರ, ಆಮ್ ಆದ್ಮಿ ಪಕ್ಷದ ವಿಕಾಸ ಸೊಪ್ಪಿನ, ಸಂತೋಷ ನರಗುಂದ, ಕರವೇಯ ಅಮೃತ ಇಜಾರಿ, ಜೆಡಿಎಸ್‌ನ ಶಿವಣ್ಣ ಬೆಲ್ಲದ, ಸಿದ್ಧು ತೇಜಿ ಸಂಗ್ರಾಮ ಸೇನೆಯ ಸಂಜೀವ ಡುಮಕನಾಳ ಸೇರಿದಂತೆ ಹಲವರು ಬೆಳಿಗಿನಿಂದಲೇ ಹೋರಾಟ ಆರಂಭಿಸಿದ್ರು.
ಹೊಸೂರ ವೃತ್ತ, ಡಿಪೋ ಸೇರಿದಂತೆ ಹಲವೆಡೆ ಸಂಚರಿಸಿ ಜನರಿಗೆ ತಿಳುವಳಿಕೆ ಹೇಳಿ, ಬಂದ್‌ಗೆ ಸಹಕಾರ ನೀಡಿ ಎಂದು ಕೇಳಿಕೊಂಡರು.
ನಗರದ ಬಹುತೇಕವಾಗಿ ಬಂದ್ ಆಗಿದ್ದು, ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಬಸ್ ಸಂಚಾರ ಕೂಡಾ ಯಾವುದೇ ತೊಂದರೆಯಿಲ್ಲದೇ ಸಾಗಿದೆ.
ಆದ್ರೇ, ನಿನ್ನೆ ಹೋರಾಟದ ಮುಂಚೂಣಿಯಲ್ಲಿ ಇರುವ ಹಾಗೇ ಮಾತಾಡಿದ್ದ ಕೊರವಿಯಾಗಲಿ, ಕಾಂಗ್ರೆಸ್‌ನ ಕೆಲವು ಮುಖಂಡರಾಗಲಿ ಬಾರದೇ ಇರುವುದು, ಹೋರಾಟದ ಬಗ್ಗೆ ಇವರಿಗಿರುವ ಆಸಕ್ತಿಯನ್ನು ತೋರಿಸತ್ತೆ.