ಹುಬ್ಬಳ್ಳಿಯ “ಆ” ಕಾರ್ಯಕ್ರಮದಲ್ಲಿನ ‘ಖುರಾನ ಪಠಣ’ಕ್ಕೆ- ಧಾರವಾಡದಲ್ಲಿ “ರುದ್ರ ಪಠಣ”…

ಧಾರವಾಡ: ವಾಣಿಜ್ಯನಗರಿಯ ಶಾಸಕ ಅರವಿಂದ ಬೆಲ್ಲದ್ ಅವರ ಕ್ಷೇತ್ರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಖುರಾನ ಪಠಣ ನಡೆದಿರುವ ಕುರಿತು ಆಕ್ರೋಶಗೊಂಡ ಬಿಜೆಪಿಗರು ಧಾರವಾಡದಲ್ಲಿ ರುದ್ರಪಠಣ, ಹೋಮ ಆಯೋಜಿಸಿದ್ದರು.
ಇವತ್ತು ನಡೆದ ಹೋಮದ ಸಮಯದಲ್ಲಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದು, ಅದಕ್ಕಿಂತ ಪೂರ್ವದಲ್ಲಿ ನಡೆದ ಘಟನೆಯೇನು ಎಂಬುದರ ಬಗ್ಗೆ ವೀಡಿಯೋ ಇದೆ ನೋಡಿ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಹೋಮ, ಪಠಣದ ವೇಳೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಪಿ.ಎಚ್.ನೀರಲಕೇರಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.