“ಹುಬ್ಬಳ್ಳಿ ಹುಡ್ದಿ-02”- ಶೇತ್ಕಿ ಜಮೀನಲ್ಲಿ “ಕಮರ್ಷಿಯಲ್” ವ್ಯವಹಾರ- ಕಣ್ಣಿದ್ದು ಕುರುಡಾದ ಪಾಲಿಕೆ….!!!
ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿನ ಅನಧಿಕೃತ ಬಳಕೆಯಿಂದ ಮಹಾನಗರ ಪಾಲಿಕೆಗೆ ಆದಾಯ ಹೇಗೆ ಮರಿಚೀಕೆಯಾಗತ್ತೆ ಎಂಬುದನ್ನ ಅರಿತು, ಏನೂ ಆಗೇ ಇಲ್ಲವೆಂಬಂತೆ ಪಾಲಿಕೆ ಅಧಿಕಾರಿಗಳು ಹಾಸು ಹೊದ್ದು ಮಲಗಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯ ಸರ್ವೇ ನಂಬರ 98 1ಅ/2ದ ಜಮೀನು ಶೇತ್ಕಿಯಾಗಿದ್ದರೂ, ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಹೊಟೇಲ್, ಕಾರು ವಾಸಿಂಗ್, ಟೀ ಶಾಪ್ ಸೇರಿದಂತೆ ಹಲವು ವ್ಯವಹಾರ ನಡೆಯುತ್ತಿದೆ. ಇಲ್ಲಿರುವ ಅಂಗಡಿಗಳಿಂದ ಲಕ್ಷಾಂತರ ರೂಪಾಯಿ ಹಣವನ್ನ ಮಾಲೀಕರು ಪಡೆಯುತ್ತಿದ್ದಾರೆ.

ಈ ಎಲ್ಲ ವಿಷಯವೂ ಗೊತ್ತಿದ್ದು ಪಾಲಿಕೆ ಅಧಿಕಾರಿಗಳು ಸುಮ್ಮನೆ ಕೂತುಣ್ಣುತ್ತಿದ್ದಾರಂತೆ. ಇದಕ್ಕೆ ಭರವಸೆ ಕೊಡುವ “ಸುಳ್ಳುಕೋರರು”, ಸಾಮಾಜಿಕ ನ್ಯಾಯ ಕೊಡಿಸುವ ಮುಖವಾಡಿಗಳು ಹಾಗೂ ಪುಡಿರೌಡಿಗಳು ಅವ್ಯವಹಾರಕ್ಕೆ ಸಾಥ್ ಕೊಡುತ್ತಿದ್ದಾರೆ.
ಇಲ್ಲಿರುವ ದಂಧೆಯ ಬಗ್ಗೆ ಸಮಗ್ರವಾದ ಮಾಹಿತಿಯ ಜೊತೆಗೆ ಇಲ್ಲಿನವರನ್ನ ಹ್ಯಾಂಡಲ್ ಮಾಡಲು “ಮಾಲೀ” ಹಾಕಿಕೊಂಡ ಅಧಿಕಾರಿಗಳ ಕುರಿತು ಕರ್ನಾಟಕವಾಯ್ಸ್.ಕಾಂ ಮತ್ತಷ್ಟು ಮಾಹಿತಿಯನ್ನ ಹೊರಹಾಕಲಿದೆ.
