ಹುಬ್ಬಳ್ಳಿ ಪೊಲೀಸರಿಗೆ ‘84’ ಮತ್ತು ‘ಶರಾಬಿ’ಗಳ ಹಾವಳಿ: ಹೈರಾಣಾದ ಖಾಕಿಗಳು…
1 min readಹುಬ್ಬಳ್ಳಿ: ನಗರದ ಪ್ರಮುಖ ಸ್ಥಳಗಳಲ್ಲಿಯೇ ಪೊಲೀಸರಿಗೆ ದಿನಬೆಳಗಾದರೇ ತಲೆ ನೋವು ತರಿಸುವ ಘಟನೆಗಳು ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಗಳು ಇದಕ್ಕೆ ಕಡಿವಾಣ ಹಾಕಬೇಕಿದೆ.
ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಂಚಾರಿ ಪೊಲೀಸರಿಗೆ ವಾಹನಗಳನ್ನ ಯಾವುದೇ ತೊಂದರೆಯಿಲ್ಲದೇ ಹೋಗಿ ಬರುವಂತೆ ಮಾಡುವುದರಲ್ಲಿಯೇ ಸುಸ್ತಾಗಿರತ್ತೆ. ಅಂತಹದರಲ್ಲಿ, ಈ ಮಾನಸಿಕ ಅಸ್ವಸ್ಥರ ಹಾವಳಿ ಶುರುವಾಗಿರತ್ತೆ.
ತಮ್ಮ ಮನಸ್ಸಿಗೆ ಬಂದಂತೆ ರಸ್ತೆಯಲ್ಲಿಯೇ ಹಾಡು ಹಾಡುತ್ತ ಹೋಗುವುದನ್ನ ನೋಡಿ, ಪೊಲೀಸರಾದರೂ ಹೇಗೆ ಸುಮ್ಮನಿರಬೇಕು. ಯಾವುದಾದರೂ ವಾಹನ ಬಂದು ಡಿಕ್ಕಿ ಹೊಡೆದರೇ ಗತಿಯೇನೆಂದು ಅವರುಗಳನ್ನ ರಸ್ತೆ ಬದಿಗೆ ತಂದು, ಉಸ್ಸಪ್ಪಾ ಎಂದು ಕೂಡುವಂತಾಗಿದೆ.
ಒಬ್ಬನ ಕಿರಿಕಿರಿ ಮುಗಿಸಿ ಮತ್ತೆ ರಸ್ತೆ ಸಂಚಾರವನ್ನ ಸುಗಮ ಮಾಡಬೇಕು ಎನ್ನುವುದರಲ್ಲಿ ಕುಡುಕನೋರ್ವ ರಸ್ತೆ ಮಧ್ಯದಲ್ಲಿ ಕುಳಿತು, ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾನೆ. ಹೀಗಾದರೇ ಪೊಲೀಸರ ಸ್ಥಿತಿ ಏನಾಗಬೇಕು.
ಇದು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಪ್ರತಿದಿನದ ಸ್ಥಿತಿ. ಕೊನೆಪಕ್ಷ 84 ಗಳನ್ನಾದರೂ ಆಸ್ಪತ್ರೆಗೆ ಸಾಗಿಸುವುದಕ್ಕೆ ಮಹಾನಗರ ಪಾಲಿಕೆ ಮುಂದಾಗಬೇಕಿದೆ, ಅಲ್ಲವೇ..