“ಗಡಿಗೆ ನುಂಗಣ್ಣನಿಗೆ ಶಾಕ್”: 1000, 1200ಕ್ಕೆ ಬ್ರೇಕ್- ರೇಟ್ ಕಾರ್ಡ್ ಮಾಡಿದ್ದವರಿಗೆ ತಪರಾಕಿ….!
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿನ ಠಾಣೆಯೊಂದರ ಮೂರು ಸ್ಟಾರಿನ ಅಧಿಕಾರಿಯೋರ್ವರು, ಕಮೀಷನರ್ ಆದೇಶವನ್ನ ಉಲ್ಲಂಘನೆ ಮಾಡಿ, ರಾಜಾರೋಷವಾಗಿ ಹಣ ಮಾಡುತ್ತಿರುವ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರ ಹಾಕಿತ್ತು.
ಮಾಹಿತಿ ಹೊರ ಬಂದ ಕೆಲವೇ ನಿಮಿಷಗಳಲ್ಲಿ ‘ಗಡಿಗೆ ನುಂಗಣ್ಣ’ನಿಗೆ ಹಿರಿಯ ಅಧಿಕಾರಿಗಳು ತಪರಾಕಿ ನೀಡಿದ್ದಲ್ಲದೇ ಯಾವ ಯಾವ ವಾಹನದಲ್ಲಿ ಯಾರೂ ಯಾರೂ ಕರ್ತವ್ಯದ ಮೇಲೆ ಹೋಗಿದ್ದರೆಂಬ ಮಾಹಿತಿಯನ್ನ ಕಲೆ ಹಾಕಿದ್ದಾರೆ.
ದಿನಕ್ಕೆ 1200 ಕೊಡುತ್ತಿದ್ದ ವಾಹನವೀಗ ಶಹರದ ಹೊರಗೆ ಹೋಗದಂತೆ ನಿರ್ಬಂಧ ಹಾಕಲಾಗಿದೆ. ಆದರೆ, ಮೂರ್ ಸ್ಟಾರಿನ ಅಧಿಕಾರಿಯು ‘ಸ್ವಲ್ಪ ದಿನಾ ಸುಮ್ನಿರಿ’ ಎಂದು ಆದೇಶ ಮಾಡಿದ್ದಾರಂತೆ.
ತಾವೂ ಬಂದಿರೋದೆ ರಸ್ತೆಯಲ್ಲಿ ಕೆಳ ವರ್ಗದ ಪೊಲೀಸರನ್ನ ಬಳಕೆ ಮಾಡಿ ಹಣ ಮಾಡೋಕೆ ಎಂದು ವರ್ತನೆ ಹೊಂದಿರುವ ಅಧಿಕಾರಿಯ ಬಗ್ಗೆ ಕೆಳವರ್ಗದ ಪೊಲೀಸರು ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೇ, ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ‘ತಲ್ವಾರ ನುಂಗಿ’ ಕಕ್ಕುವ ಸ್ಥಿತಿ ಬಂದಾಗ ಪೊಲೀಸರೋರ್ವರನ್ನ ಅಮಾನತ್ತು ಮಾಡಿಸಿ, ತಾನೂ ಸತ್ಯ ಹರಿಶ್ಚಂದ್ರ ಎಂದು ಪೋಸ್ ಕೊಟ್ಟಿದ್ದನ್ನ ಸ್ಮರಣೆಯಲ್ಲಿಟ್ಟುಕೊಳ್ಳಬೇಕಿದೆ.
ತಮ್ಮ ಹಣದ ಹಪಾಹಪಿಗೆ ಪೊಲೀಸ, ಹವಾಲ್ದಾರ ಹಾಗೂ ಎಎಸ್ಐಗಳನ್ನ ಬಳಕೆ ಮಾಡುವ ‘ಗಡಿಗೆ ನುಂಗಣ್ಣ’ನಿಂದ ಜಾಗೃತರಾಗಿರುವುದು ಒಳ್ಳೆಯದು.
ಈ ಠಾಣೆಯ ವ್ಯಾಪ್ತಿಯಲ್ಲಿ ಏನೇ ಕಾನೂನು ಬಾಹಿರ ಚಟುವಟಿಕೆ ನಡೆದರೂ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನವನ್ನ ಮುಂದುವರೆಸುತ್ತೆ.