ಹುಬ್ಬಳ್ಳಿ “ರೌಡಿ ಷೀಟರ್”ಗಳಿಗೆ ‘ಮಾರ್ನಿಂಗ್ ಶಾಕ್’ ಕೊಟ್ಟ ಪೊಲೀಸರು…!

ಹುಬ್ಬಳ್ಳಿ: ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಯತ್ನಗಳು ಅಲ್ಲಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಷೀಟರ್ ಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ನವನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ರೌಡಿ ಷೀಟರ್ ಗಳನ್ನ ಠಾಣೆಗೆ ತಂದು ಎಚ್ಚರಿಕೆ ನೀಡಲಾಗಿದೆ. ಹಾಗೇ, ನಗರದ ವಿವಿಧ ಪೊಲೀಸ್ ಠಾಣೆಯಲ್ಲೂ ಡ್ರಿಲ್ ಕೈಗೊಳ್ಳಲಾಗಿದೆ.
ರೌಡಿ ಷೀಟರ್ ಗಳು ಯಾವುದೇ ಪ್ರಕರಣದಲ್ಲಿ ಕಂಡು ಬಂದರೇ ಅವರುಗಳ ವಿರುದ್ಧ ಕಠಿಣ ಕ್ರಮವನ್ನ ಜರುಗಿಸುವ ಎಚ್ಚರಿಕೆಯನ್ನ ನೀಡಲಾಗಿದೆ.