ಹುಬ್ಬಳ್ಳಿಯಲ್ಲಿ ‘ಪೊಲೀಸರ ಗಾಂಧಿಗಿರಿ’- ಬಡವನ ಜೊತೆ ಆರಕ್ಷಕನ ನಡೆ…!
1 min readಹುಬ್ಬಳ್ಳಿ: ಲಾಕ್ ಡೌನ್ ಆರಂಭವಾದಾಗಿನಿಂದ ಬಡವರು ನಿರ್ಗತಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೆಂಬುದು ಸತ್ಯವಾದರೂ, ಅಲ್ಲಲ್ಲಿ ಬದುಕು ಕಟ್ಟಿಕೊಳ್ಳುವ ಜೀವಗಳು ಶ್ರಮ ವಹಿಸುತ್ತಲೇ ಇವೆ. ಅಂಥಹ ಶ್ರಮ ಜೀವಿಗಳಿಗೆ ಅವಕಾಶ ಮಾಡಿಕೊಟ್ಟಿರೋದು ಹುಬ್ಬಳ್ಳಿ ಪೊಲೀಸರ ಗಾಂಧಿಗಿರಿಯನ್ನ ತೋರಿಸುತ್ತಿದೆ.
ಆಕಸ್ಮಿಕವಾಗಿ ಬರುವ ಮಳೆ, ಬೆಳಗಷ್ಟೇ ಮಾರಾಟ ಮಾಡಬೇಕಾದ ಅನಿವಾರ್ಯತೆ. ಎಷ್ಟು ಜನಾ ಬಂದರೂ, ಬೆಳಗಿನ ಹಣ್ಣು ಮಾರಾಟ ಅಷ್ಟಕಷ್ಟೇ. ಹಾಗಾಗಿಯೇ ಮಾವಿನ ಹಣ್ಣನ್ನ ಮಾರಾಟ ಮಾಡುವ ಜೀವಗಳ ಪಾಡು ಅಷ್ಟಿಷ್ಟಲ್ಲ.
ಇಂತಹ ಸಮಯದಲ್ಲಿ ಹುಬ್ಬಳ್ಳಿಯ ಹಲವು ಪ್ರದೇಶಗಳಲ್ಲಿ ಪೊಲೀಸರು ಬದುಕಿಗೆ ಆಸರೆಯಾಗುತ್ತಿದ್ದಾರೆ. ಒಬ್ಬೋಬ್ಬರೇ ತಿರುಗಬೇಕಾದ ಮಹಿಳೆಯರಿಗೆ ತಾವೇ ಹಣ್ಣಿನ ಬಾಕ್ಸ್ ಗಳನ್ನ ಕೊಟ್ಟು, ವ್ಯಾಪಾರಕ್ಕೆ ಅನುಕೂಲವನ್ನು ಮಾಡುತ್ತಿದ್ದಾರೆ.
ಇಂತಹದೊಂದು ದೃಶ್ಯ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಕಂಡು ಬಂದಿತು. ಉಪನಗರ ಠಾಣೆಯ ಪೊಲೀಸ್ ಉಮೇಶ ದೊಡವಾಡ, ವ್ಯಾಪಾರಿ ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು. ಹಾಗಾಗಿಯೇ ಹುಬ್ಬಳ್ಳಿಯ ಪೊಲೀಸರು ಗಾಂಧಿಗಿರಿಯನ್ನ ಅನುಸರಿಸುತ್ತಿದ್ದಾರೆಂದು ಹೇಳಿದ್ದು..