ಕೋರೋನಾ ಸೋಂಕು ಶಂಕೆ: ASI, HC, PC ಕ್ವಾರಂಟೈನ್ ಗೆ

ಹುಬ್ಬಳ್ಳಿ: ಕೇಸ್ ನಂಬರ 191ರ ಜೊತೆ ಸಂಪರ್ಕ ಹೊಂದಿದ ಪರಿಣಾಮ ಇಬ್ಬರು ಎಎಸ್ ಐ, ಇಬ್ಬರು ಹವಾಲ್ದಾರ್ ಹಾಗೂ ಓರ್ವ ಪೇದೆಯನ್ನ ಕ್ವಾರಂಟೈನ್ ಗೆ ಒಳಪಡಿಸಲು ಖಾಸಗಿ ಹೊಟೇಲ್ ಗೆ ರವಾನೆ ಮಾಡಲಾಗಿದೆ.
ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ನಂಬರ 191 ಪತ್ತೆಯಾದ ಸಮಯದಲ್ಲಿ ಅವರನ್ನ ಕರೆದುಕೊಂಡು ವಿಚಾರಣೆ ಮಾಡುವ ಸಮಯದಲ್ಲಿ ಸಂಪರ್ಕದ ಶಂಕೆಯ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಈಗಾಗಲೇ ಜಿಲ್ಲಾಡಳಿತ ಖಾಸಗಿ ಹೊಟೇಲ್ ನಲ್ಲಿ ಕ್ವಾಂರಟೈನ್ ವ್ಯವಸ್ಥೆ ಮಾಡಿದ್ದು, ಇವರನ್ನ ಕೂಡ ಅಲ್ಲಿಯೇ ಸ್ಥಳಾಂತರ ಮಾಡಲಾಗಿದೆ.
ಪೊಲೀಸರ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.