ಹುಬ್ಬಳ್ಳಿಯಲ್ಲಿ “ಆಟದ ಮೈದಾನ” ಕಬಳಿಕೆ ಹುನ್ನಾರ: ಖಡಕ್ ವಾರ್ನಿಂಗ್ ನೀಡಿದ ಸಚಿವ ಸಂತೋಷ ಲಾಡ…

ಧಾರವಾಡ: ಆಟದ ಮೈದಾನದಲ್ಲಿ ಯಾವುದೇ ಥರದ ಕಾಮಗಾರಿ ನಡೆಯದಂತೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಪಾಲಿಕೆ ಹಾಗೂ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಪಾಲಿಕೆಯ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನ ವಿವೇಕಾನಂದ ಶಿಕ್ಷಣ ಸಂಸ್ಥೆಯು ಸಚಿವರಿಗೆ ನೀಡಿದ ನಂತರ, ಸಚಿವರು ಈ ಥರದ ಆದೇಶವನ್ನ ನೀಡಿದ್ದಾರೆ.
ರವಿ ದಂಡಿನ್ ನೇತೃತ್ವದಲ್ಲಿ ಸಚಿವ ಸಂತೋಷ ಲಾಡ ಅವರನ್ನ ಭೇಟಿ ಮಾಡಿ, ಕೆಲವರು ಆಟದ ಮೈದಾನದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ದೂರಿದ್ದರು. ಸಾಮಾಜಿಕ ಹೋರಾಟಗಾರ ಉಮೇಶ ಧುಷಿ, ಸಂದೀಪ ಬೂದಿಹಾಳ, ಅಣ್ಣಿಗೇರಿ ಉಪಸ್ಥಿತರಿದ್ದರು.