ಹುಬ್ಬಳ್ಳಿಯ ಬಿಜೆಪಿ ಕಚೇರಿ ಬಳಿಯ “ಮೈದಾನ ಕಬಳಿಕೆ”- ಕಣ್ತೆರೆದು ನೋಡಿ ಪಾಲಿಕೆ ಆಯುಕ್ತರೇ…!!!

ಹುಬ್ಬಳ್ಳಿ: ಅರವಿಂದನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಭಾರತೀಯ ಜನತಾ ಪಕ್ಷದ ಕಚೇರಿಯ ಪಕ್ಕದಲ್ಲಿ ಮಹಾನಗರ ಪಾಲಿಕೆಯ ಜಾಗವನ್ನ ಪಟ್ಟಭದ್ರ ಹಿತಾಸಕ್ತಿಗಳು ಕಬಳಿಕೆ ಮಾಡುತ್ತಿದ್ದಾರೆಂಬ ದೃಶ್ಯಗಳು ಕಂಡು ಬಂದಿವೆ.
ಪಾಲಿಕೆಯ ಜಾಗದ ಬಗ್ಗೆ ಇರುವ ದಾಖಲೆಗಳು ವೈರಲ್ ಆಗಿದ್ದು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಯವರ ಗಮನಕ್ಕೆ ಇದ್ದರೂ ಕ್ರಮ ಜರುಗಿಸುತ್ತಿಲ್ಲವೆಂದು ಹೇಳಲಾಗುತ್ತಿದೆ.
ದಾಖಲೆಗಳನ್ನ ನೋಡಿಯೂ ಕ್ರಮ ಜರುಗಿಸದ ಹಿನ್ನೆಲೆ ಏನಿರಬಹುದೆಂಬುದಕ್ಕೆ ಆಯುಕ್ತರೇ ಉತ್ತರಿಸಬೇಕಿದೆ.
ಈಗಲಾದರೂ, ಪಾಲಿಕೆ ಆಯುಕ್ತರು ನೋಡಿ ಕ್ರಮ ಜರುಗಿಸುತ್ತಾರೋ ಅಥವಾ ಕಬಳಿಕೆ ಮಾಡಲು ಅವಕಾಶ ಮಾಡಿಕೊಡುತ್ತಾರೋ ಕಾದು ನೋಡಬೇಕಿದೆ.