“ಫಿನೋ ಹಮೇಶಾ” ಹುಬ್ಬಳ್ಳಿ-ಧಾರವಾಡದಲ್ಲಿ ಜನಮನ್ನಣೆ: ಅರ್ಪಿತ್ ಖಂಡೇಲ್ವಾಲ್

ಹುಬ್ಬಳ್ಳಿ: ನಗರದ ಕೇಶ್ವಾಪುರ ವಸತಿ ಗೃಹದಲ್ಲಿರುವ ಭಾಗ್ಯಶ್ರೀ ಕಿರಾಣಿ ಮತ್ತು ಜನರಲ್ ಸ್ಟೋರ್ ಗೆ ಫಿನೋ ಪೇಮೆಂಟ್ಸ್ ಬ್ಯಾಂಕಿನ ವಲಯ ಮುಖ್ಯಸ್ಥ ಅರ್ಪಿತ್ ಖಡೇಲ್ವಾಲ್ ಭೇಟಿ ನೀಡಿ, ಗ್ರಾಹಕರಿಗೆ ಆಗುತ್ತಿರುವ ಅನುಕೂಲದ ಬಗ್ಗೆ ಪರಿಶೀಲನೆ ನಡೆಸಿದರು.

ಭಾಗ್ಯಶ್ರೀ ಕಿರಾಣಿ ಅಂಗಡಿಯಲ್ಲಿ ಮೈಕ್ರೋ ಎಟಿಎಂ ಮತ್ತು ಆಧಾರ ಶಸಕ್ತ ಪಾವತಿ ವ್ಯವಸ್ಥೆ ಸಾಧನವನ್ನ ಹೊಂದಿದ್ದು, ಅಂಗಡಿಯು ಮಿನಿ ಬ್ಯಾಂಕ್ ಶಾಖೆಯಾಗಿ ರೂಪಾಂತರಗೊಂಡಿದೆ. ಇದಕ್ಕೆ ಕಾರಣವಾಗಿರುವುದು ಫಿನೋ ಹಮೇಶಾ ಎಂಬ ಉಪಕ್ರಮ ಎನ್ನುವುದು ಖಂಡೇಲ್ವಾಲ್ ಅವರ ಅಭಿಪ್ರಾಯ.
ಯಾವಾಗಲೂ ಲಭ್ಯವಿರುವ ಬ್ಯಾಂಕಿಂಗ್ ಸೇವೆಗಳು ಈಗೀನ ಸಮಯದ ಅಗತ್ಯವಾಗಿವೆ. ವಿಶೇಷವಾಗಿ ಹುಬ್ಬಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಗುಣಮಟಟದ ಬ್ಯಾಂಕಿಂಗ್ ಸೇವೆಗಳು ಬೇಕಾಗುತ್ತವೆ. ನಮ್ಮ ಮೈಕ್ರೋ ಎಟಿಎಂ ಮತ್ತು ಎಇಪಿಎಸ್ ಶಸಕ್ತ ಸೇವೆಗಳನ್ನ ಒದಗಿಸುತ್ತದೆ ಎಂದು ಹೇಳಿದರು.