Posts Slider

Karnataka Voice

Latest Kannada News

ಹುಬ್ಬಳ್ಳಿ- “ಬ್ರಹ್ಮಾಂಡ ಲೂಟಿ’ಯಲ್ಲಿ ಬಲ್ಬ್ ಬೆಲೆ ಇಪ್ಪತೈದು ಪಟ್ಟು ಹೆಚ್ಚು…!!!

Spread the love

ಹುಬ್ಬಳ್ಳಿ: ಲೂಟಿ ಹೊಡೆಯುವುದನ್ನ ಕಾಯಕ ಮಾಡಿಕೊಂಡಿರುವ ಆಸಾಮಿಯೋರ್ವ ಒಂದು ಬಲ್ಬ್ ದರವನ್ನ ಇಪ್ಪತೈದು ಪಟ್ಟು ಹೆಚ್ಚಿಗೆ ದರ ಹಚ್ಚಿ, ಸಾರ್ವಜನಿಕರ ಹಣವನ್ನ ಜೇಬಿಗೆ ಹಾಕಿಕೊಳ್ಳುತ್ತಿರುವುದು ಬಹಿರಂಗವಾಗುತ್ತಿದೆ.

ಸುಮಾರು 150 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿಗೆ ಮಟಿರಿಯಲ್ ಕೊಡುವ ಈ ಆಸಾಮಿ, ತನ್ನ ಒಂದು ವಸ್ತುವಿಗೆ ಹತ್ತು ಪಟ್ಟು ಹಣವನ್ನ ತಾನೇ ತೆಗೆದುಕೊಳ್ಳುತ್ತಾನೆ. ಉಳಿದ “ಪಟ್ಟು” ಗಳನ್ನ ತಾಲೂಕಿನ ಅಧಿಕಾರಿಗಳಿಗೂ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ, ಪಿಡಿಓಗೆ ಕೊಡುತ್ತಾನೆ ಎಂಬುದು ರಹಸ್ಯವಾಗಿ ಉಳಿದಿಲ್ಲ.

ಈ ದಗಲುಬಾಜಿ ತಾನೂ ಮಾಡಿರುವ ತಪ್ಪಿನ ಅರಿವಿದ್ದರೂ, ಕಂಡ ಕಂಡವರ ಮನೆ ಬಾಗಿಲಿಗೆ ಹೋಗಿ ಪಾದರಕ್ಷೆ ಬೀಡುವ ಜಾಗದಲ್ಲಿ ನಿಂತು ‘ನಾನೇನು ಮಾಡಿಲ್ಲ’ ಎನ್ನುವ ಪೋಸು ಕೊಡುತ್ತಿರುವುದು ವೀಡಿಯೋ ಸಮೇತ ಕೆವಿಗೆ ಲಭಿಸಿದೆ.

ಈತನ ಲೂಟಿತನದ ಡಾಕ್ಯುಮೆಂಟ್‌ನ್ನ ನಿಷ್ಠಾವಂತ ಅಧಿಕಾರಿಗಳು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೇ ಸಾಕು, ಬಂಡವಾಳ ಬಯಲಾಗತ್ತೆ.


Spread the love

Leave a Reply

Your email address will not be published. Required fields are marked *