ಹುಬ್ಬಳ್ಳಿಯ “ಪಾಳೆ” ಬಳಿ ‘ಸೀ ಬರ್ಡ್” ಬಸ್ ಪಲ್ಟಿ-ಹಲವರಿಗೆ ಗಂಭೀರ ಗಾಯ…

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದ ಬಳಿ ಪಲ್ಟಿಯಾದ ನಡೆದಿದ್ದು ಹಲವರಿಗೆ ತೀವ್ರ ಥರದ ಗಾಯಗಳಾಗಿವೆ.
ಸೀ ಬರ್ಡ್ ಕಂಪನಿಯ ಬಸ್ ಪ್ರಯಾಣಿಕರನ್ನ ಕರೆದುಕೊಂಡು ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಚಾಲಕನಿಂದ ಮಾಹಿತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.