ಹುಬ್ಬಳ್ಳಿಯಲ್ಲೊಂದು ಪವಾಡ… ನೂರು ಜನರಿಗೂ ಅನಿಸಿದ್ದನ್ನ ಅರ್ಚಕ ನೋಡಿದಾ… ಶ್.. ಅದು ಶವ…!

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ವಿನಾಯಕ ಲಾಡ್ಜ್ ಎದುರಲ್ಲೇ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಶವವಾಗಿರುವ ಪ್ರಕರಣ ರವಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಹಳೇ ಬಸ್ ನಿಲ್ದಾಣದ ಮಾರ್ಗವಾಗಿದ್ದರಿಂದ ನೂರಾರೂ ಜನರು ಶವದ ಪಕ್ಕ ತಿರುಗಾಡಿದರೂ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ, ಅರ್ಚಕರೊಬ್ಬರು ‘ಗೋವಿಂದ.. ಗೋವಿಂದ..’ ಎನ್ನುತ್ತಲೇ ರಸ್ತೆ ಪಕ್ಕದಲ್ಲಿದ್ದ ಶವದ ಮೇಲೆ ಕಲ್ಲಿಟ್ಟು ನಡೆದುಬಿಟ್ಟರು.
ಈ ಘಟನೆ ನಡೆದಾಗಲೂ ಅರ್ಚಕರಿಟ್ಟ ಕಲ್ಲನ್ನ ಸಮೀಪದಲ್ಲಿಯೇ ನಿಂತಿದ್ದ ವ್ಯಕ್ತಿಯೊಬ್ಬ ತೆಗೆದ. ಆತನ ಪ್ರಕಾರ ಮಲಗಿದಾತ, ಇನ್ನೂ ಜೀವಂತವಾಗಿದ್ದಾನೆ ಎಂದುಕೊಂಡಿದ್ದ.
ಆದರೆ, ಅರ್ಚಕ ಮಾಡಿದ್ದರಲ್ಲೇ ಗೂಡಾರ್ಥವಿತ್ತು ಎಂದು ಕೆಲವೇ ನಿಮಿಷಗಳಲ್ಲಿ ಗೊತ್ತಾಗಿದೆ. ಮಲಗಿದ ರೀತಿಯಲ್ಲಿದ್ದ ವ್ಯಕ್ತಿ ಶವವಾಗಿ ಅದೇಷ್ಟು ಗಂಟೆಗಳು ಕಳೆದಿದ್ದವೋ ಗೊತ್ತಿಲ್ಲ.

ಘಟನೆಯ ಬಗ್ಗೆ ಉಪನಗರ ಠಾಣೆ ಇನ್ಸಪೆಕ್ಟರ್ ಅವರಿಗೆ ಮಾಹಿತಿ ಸಿಕ್ಕ ನಂತರ, ಶವವನ್ನ ಕಿಮ್ಸಗೆ ರವಾನೆ ಮಾಡಿದ್ದು, ರಸ್ತೆಯಲ್ಲಿ ಉಸಿರು ಬಿಟ್ಟ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ.