ಹುಬ್ಬಳ್ಳಿ: ಪಾಲಕರ ಧಿಕ್ಕರಿಸಿ ಪ್ರೇಮ ವಿವಾಹ- ಮಗಳ ಹತ್ಯೆಗೆ ತಂದೆ ಸಂಚು- ಸ್ಥಿತಿ ಗಂಭೀರ…
ಹುಬ್ಬಳ್ಳಿ: ಪ್ರೇಮ ವಿವಾಹವಾಗಿ ಊರು ಬಿಟ್ಟಿದ್ದ ಜೋಡಿಯೊಂದು ಮತ್ತೆ ಊರಿಗೆ ಬಂದ ಕೆಲವೇ ದಿನಗಳಲ್ಲಿ ಮಗಳ ಹತ್ಯೆಗೆ ತಂದೆ ಮುಂದಾದ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ಸಂಭವಿಸಿದ್ದು, ಗರ್ಭಿಣಿ ಮಗಳ ಸ್ಥಿತಿ ಗಂಭೀರವಾಗಿದೆ.
ಘಟನೆಯ ಎಕ್ಸಕ್ಲೂಸಿವ್ ವೀಡಿಯೋ…
ಪ್ರೇಮ ವಿವಾಹ ಮಾಡಿಕೊಂಡಿದ್ದ ಮಾನ್ಯ ಪಾಟೀಲ ಹಾಗೂ ವಿವೇಕಾನಂದ ದೊಡ್ಡಮನಿ ಊರು ತೊರೆದಿದ್ದರು. ಈಗ ಮಾನ್ಯ ಪಾಟೀಲ ಗರ್ಭಿಣಿಯಾಗಿದ್ದು, ಮರಳಿ ಗ್ರಾಮಕ್ಕೆ ಬಂದಿದ್ದಾರೆ. ಈ ವಿಷಯ ಮಾನ್ಯಳ ತಂದೆ ಹತ್ಯೆಗೆ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ವಿವೇಕಾನಂದರ ತಂದೆಯ ಮೇಲೆ ಟ್ರ್ಯಾಕ್ಟರ್ ಹಾಯಿಸಲು ಯತ್ನ ನಡೆದಿದೆ. ದೊಡ್ಡಮನಿಯವರ ಕುಟುಂಬದ ಹಲವು ಸದಸ್ಯರ ಮೇಲೆ ಹಲ್ಲೆಯೂ ನಡೆದಿದೆ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಖಾಸಗಿ ಆಸ್ಪತ್ರೆಗೆ ಎಸ್ಪಿ ಗುಂಜನ ಆರ್ಯ ಕೂಡಾ ಆಗಮಿಸಿದ್ದಾರೆ.
