ಹತ್ಯೆಯಾದ ಅಂಜಲಿಯ ಬೆನ್ನುಬಿದ್ದವ “ಪೋಕ್ಸೊ” ಕೇಸಲ್ಲಿ ಜೈಲು ಪಾಲಾಗಿದ್ದ- ಆತನನ್ನ ಹೊರಗೆ ತಂದವರು ಇವತ್ತು ಹೋರಾಟ-ಹಾರಾಟ ಮಾಡ್ತಿದ್ರು…!!!

ಹುಬ್ಬಳ್ಳಿ: ತಂದೆ-ತಾಯಿಯಿಲ್ಲದ ನತದೃಷ್ಟ ಅಂಜಲಿ ಅಂಬಿಗೇರ ಅಮಾನುಷವಾಗಿ ಹತ್ಯೆಯಾಗಿದ್ದು, ಆರೋಪಿಗೆ ಶಿಕ್ಷೆ ಆಗಬೇಕೆಂದು ಹಲವರು ಹೋರಾಟ ನಡೆಸುತ್ತಿದ್ದಾರೆ. ಅದರಲ್ಲಿಯೋರ್ವ ಇದೇ ಅಂಜಲಿಯ ಜೊತೆಗೋಗಿ ಪೋಕ್ಸೊ ಪ್ರಕರಣದ ಆರೋಪಿಯನ್ನ ಹೊರಗೆ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಅಂಶ ಬೆಳಕಿಗೆ ಬರಲಾರಂಭಿಸಿದೆ.
ಹೌದು… ಇಂದು ಬೆಳಿಗ್ಗೆಯಷ್ಟೇ ಅಂಜಲಿ ಅಂಬಿಗೇರ ಬಗ್ಗೆ ತನಗನಿಸಿದ ರೀತಿಯಲ್ಲಿ ಮಾತನಾಡಿರುವ “ಮಹಾನಾಯಕ”ನಾಗುವ ಹುಚ್ಚು ಕನಸಿನಲ್ಲಿರುವ ವ್ಯಕ್ತಿಯೇ ಆ ಯುವಕನನ್ನ ಜೈಲಿಂದ ಹೊರಗೆ ತರಲು ಕಷ್ಟಪಟ್ಟು ಪ್ರಯತ್ನ ಮಾಡಿದ್ದನೆಂಬ ಅಂಶ ವೀರಾಪೂರ ಓಣಿಯ ಗಲ್ಲಿಗಳಲ್ಲಿ ಲಯಬದ್ಧವಾಗಿ ಹೊರಬರತೊಡಗಿದೆ.
ಮನುಷ್ಯತ್ವ ಕಳೆದುಕೊಂಡ ವ್ಯಕ್ತಿಗಳಿಗೆ ಹೊರಗೊಂದು ಒಳಗೊಂದು ಇರೋದು ಕಷ್ಟವೇನಲ್ಲ ಬಿಡಿ. ಇಂದು ಕೂಡಾ ಆ ವ್ಯಕ್ತಿ ಅಸಹ್ಯವಾಗಿ ಮಾತನಾಡಿ, ಮತ್ತೆ ಬಂದು ಹೋರಾಟದ ವೇಷ ಹಾಕಿಕೊಂಡಿದ್ದು ನೋಡಿ ಈತನ ಪಾತ್ರ “ರಂಜನೀಯ”ವಾಗಿರುವುದನ್ನ ಅರ್ಥ ಮಾಡಿಕೊಂಡಿದ್ದಾರೆ.
ಇಂತಹ ಧೂರ್ತರ ನಡುವೆ ಅಮಾಯಕ ಪ್ರಾಣಗಳು ಹೋಗುತ್ತಿವೆ ಮತ್ತೂ ಹೋಗುತ್ತಲೇ ಇರುತ್ತವೆ. ಮಾನವನ ಮನಸ್ಸು ಇಷ್ಟೊಂದು ಕ್ರೂರಿಯಾಗುತ್ತಿರುವುದು ಅವರು ಬೆಳೆದ ಸಂಸ್ಕೃತಿಯನ್ನ ಬಿಂಬಿಸುತ್ತದೆ ಎನ್ನುವುದರಲ್ಲಿ ಅರ್ಥವಿದೆ ಅಲ್ಲವೇ..