ಹುಬ್ಬಳ್ಳಿಯಲ್ಲಿ “ಬಡ್ಡಿ-ಮಕ್ಕಳ” ಹಲ್ಲೆ: ಬೆಳಗಾಗುವುದರೊಳಗಾಗಿ ಹೆಣವಾದ ಲೋಕೇಶ…!
![](https://karnatakavoice.com/wp-content/uploads/2021/09/WhatsApp-Image-2021-09-27-at-4.33.44-PM-1024x1024.jpeg)
ಹುಬ್ಬಳ್ಳಿ: ಐದು ಸಾವಿರ ರೂಪಾಯಿ ಬಡ್ಡಿ ಹಣದ ಜೊತೆಗೆ ಆಟೋದ ದಿನದ ರಿಪೋರ್ಟ್ ಸರಿಯಾಗಿ ಕೊಡುತ್ತಿಲ್ಲವೆಂಬ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣದಲ್ಲೀಗ, ಆಟೋ ಚಾಲಕ ಸಾವಿಗೀಡಾಗಿದ್ದು, ಬಡ್ಡಿ ನೀಡಿ ಹಲ್ಲೆ ಮಾಡಿದವರು ಪರಾರಿಯಾದ ಘಟನೆ ಹಳೇಹುಬ್ಬಳ್ಳಿಯಲ್ಲಿ ನಡೆದಿದೆ.
ನೇಕಾರನಗರದ ಚವ್ಹಾಣ ಪ್ಲಾಟ್ ನ ಲೋಕೇಶ ಎಂಬ ಆಟೋ ಚಾಲಕನಿಗೆ ಮಾರುತಿ ಎಂಬಾತ ಬಡ್ಡಿಯಾಗಿ 5 ಸಾವಿರ ರೂಪಾಯಿ ನೀಡಿದ್ದ. ಅಷ್ಟೇ ಅಲ್ಲ, ದಿನವೊಂದಕ್ಕೆ ಆಟೋದ 200 ರೂಪಾಯಿ ರಿಪೋರ್ಟ್ ಲೋಕೇಶ ಕೊಡಬೇಕಾಗಿತ್ತು.
ಘಟನೆಯ ಬಗ್ಗೆ ಕೊಲೆಯಾದವನ ಸಹೋದರ, ಗೆಳೆಯರು ಹೇಳಿದ್ದಿಲ್ಲಿದೆ ನೋಡಿ..
ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.