ಆಕೆ ಹಿರೋಯಿನ್ ಅಲ್ಲಾ ವಿಲನ್: ಅಣ್ಣನ ರುಂಡ ಚೆಂಡಾಡಿದ್ದರಲ್ಲಿ ಈಕೆಯದ್ದೆ ಮೇನ್ ರೋಲ್….!
1 min readಹುಬ್ಬಳ್ಳಿ: ಇದು ಬೆಚ್ಚಿ ಬೀಳಿಸುವ ಮಾಹಿತಿ. ಧಾರವಾಡ ಜಿಲ್ಲೆಯ ಪೊಲೀಸರನ್ನೂ ಆತಂಕದಲ್ಲಿ ದೂಡಿದ್ದ ಪ್ರಕರಣದ ಹೊಸ ಸ್ವರೂಪ ಬಯಲಾಗಿದೆ. ರುಂಡ-ಮುಂಡ ಚೆಂಡಾಡಿದ ಪ್ರಕರಣದಲ್ಲಿ ಭೀಕರವಾಗಿ ಹತ್ಯೆಯಾದ ಯುವಕನ ಸಹೋದರಿ ಕಂ ಚಲನಚಿತ್ರ ನಟಿ ಕಂ ಮಾಡೆಲ್ ಕಂ ವಿಲನ್ ಪಾತ್ರ ಇರುವುದು ಸ್ಪಷ್ಟವಾಗಿದ್ದು, ಚಿತ್ರನಟಿ ಕೊನೆಗೂ ಜೈಲು ಪಾಲಾಗಿದ್ದಾಳೆ.
ಹೌದು… ಕರ್ನಾಟಕವಾಯ್ಸ್.ಕಾಂ ಈ ಪ್ರಕರಣ ಆರಂಭವಾದಾಗಿನಿಂದ ಫಾಲೋಅಪ್ ಮಾಡಿಕೊಂಡು ಬರುತ್ತಿದೆ. ಅಷ್ಟೇ ಅಲ್ಲ, ಸಮಗ್ರವಾದ ಮಾಹಿತಿಯನ್ನ ಹೆಕ್ಕಿ ನಿಮ್ಮ ಮುಂದಿಡುತ್ತಿದೆ.
ರಾಕೇಶ ಶೆಟ್ಟಿ ಎಂಬ ಸಹೋದರನನ್ನ ಮೂರು ಸೈಟ್ ವಿಚಾರಕ್ಕೆ ಕೊಲೆ ಮಾಡಿದ್ದು, ಈಗಾಗಲೇ ಸಿಕ್ಕಿರುವ ನಾಲ್ವರ ಜೊತೆ ರಾಕೇಶ ಶೆಟ್ಟಿಯ ಸಹೋದರಿ ಛೋಟಾ ಬಾಂಬೆ ಸಿನೇಮಾದ ಹಿರೋಯಿನ್ ಶನಾಯ ಉರ್ಫ್ ಸೋನಿ ಕಾಟವೆ ಪಾತ್ರ ಬಯಲಾಗಿದೆ. ಅದೇ ಕಾರಣಕ್ಕೆ ಗಗನಸಖಿಯೂ ಆಗಿದ್ದ ಶನಾಯ್ ಜೈಲು ಪಾಲಾಗಿದ್ದಾಳೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದೇವರಗುಡಿಹಾಳದಲ್ಲಿ ಸಿಕ್ಕ ರುಂಡವಿಟ್ಟುಕೊಂಡು ತನಿಖೆ ಆರಂಭಿಸಿದ್ದರು. ಆ ತನಿಖೆಯಲ್ಲಿ ಮಹತ್ವದ ಸಾಕ್ಷ್ಯ ಹುಡುಕಿದ್ದು, ನಾರಾಯಣ ಎಂಬ ಪೇದೆ ಮತ್ತೂ ಧಾರವಾಡ ಗ್ರಾಮೀಣ ಪಿಎಸ್ಐ ಮಹೇಂದ್ರಕುಮಾರ. ಅವರು ಹುಡುಕಿದ ಸಾಕ್ಷ್ಯದಿಂದ ಇಡೀ ಪ್ರಕರಣ ಬಯಲಾಗಿತ್ತು. ಅಷ್ಟೇ ಅಲ್ಲ, ಕಮೀಷನರೇಟ್ ಪೊಲೀಸರು ತಲೆತಗ್ಗಿಸುವಂತಾಗಿತ್ತು.
ಕಳೆದ ನಾಲ್ಕು ದಿನದಿಂದ ನಿರಂತರವಾಗಿ ನಡೆಯುತ್ತಿದ್ದ ತನಿಖೆಯಲ್ಲಿ ಚಿತ್ರನಟಿಯ ಪಾತ್ರ ಬಯಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಇರುವ ಸೈಟ್ ಸಲುವಾಗಿಯೇ ಹತ್ಯೆ ನಡೆದಿದೆ. ಇದರಲ್ಲಿ ಶನಾಯ್ ಕಾಟವೆ ಮುಖವಾಡ ಬಯಲಾಗಿದೆ.