ಹುಬ್ಬಳ್ಳಿ: ದೊಡ್ಡಮಗನ ಅನೈತಿಕತೆ ಪ್ರಶ್ನಿಸಲು ಹೋದಾಗ ಪತಿ-ಮಕ್ಕಳಿಂದಲೇ ಹತ್ಯೆಯಾದ ಮಹಿಳೆ….

ಹುಬ್ಬಳ್ಳಿ: ಮದುವೆಯಾದರೂ ಪರ ಸ್ತ್ರೀ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಹಿರಿಯ ಮಗನನ್ನ ಪ್ರಶ್ನಿಸುತ್ತಿದ್ದಾಗ, ಎಲ್ಲರೂ ಬಡಿದಾಡಿಕೊಳ್ಳುತ್ತಿದ್ದ ಸಮಯದಲ್ಲಿ ಗಾಜು ತಗುಲಿ ಮಹಿಳೆ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ತೊರವಿಹಕ್ಕಲದಲ್ಲಿ ಸಂಭವಿಸಿದೆ.
ಕಮೀಷನರ್ ಹತ್ಯೆ ಬಗ್ಗೆ ಹೇಳಿದ್ದಿಲ್ಲಿದೆ….
ಮಂಜುನಾಥನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಮ್ಮ ಲಕ್ಷ್ಮಣ ಮೇಲೆ ಹಲ್ಲೆಗೆ ಯತ್ನಿಸಿದ್ದ ಮಂಜುನಾಥ. ಇದೇ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಪದ್ಮಾಳನ್ನ ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಪದ್ಮಾ ಬೆಳಗಿನ ಜಾವ 7 ಗಂಟೆಗೆ ಸಾವಿಗೀಡಾಗಿದ್ದಾರೆ.
ಪದ್ಮಾ ಅವರ ಪತಿ ಹಾಗೂ ಇಬ್ಬರು ಮಕ್ಕಳನ್ನ ಪೊಲೀಸರು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.