Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಭೀಕರ ಅಗ್ನಿ ಅವಘಡ: ಮೆಟ್ರೋ ಮಾಲ್ ಭಸ್ಮ, ದಂಪತಿ ಪಾರು…

Spread the love

ಹುಬ್ಬಳ್ಳಿ: ನಗರದ ಮರಾಠಗಲ್ಲಿಯಲ್ಲಿರುವ ಪ್ರತಿಷ್ಠಿತ ‘ಸುಖಸಾಗರ್ ಮೆಟ್ರೋ ಮಾಲ್’ನಲ್ಲಿ ನಡುರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡು, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

​ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಾಲ್ಕನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮಾಲ್ ಆವರಿಸಿದೆ. ಇದರ ಪರಿಣಾಮವಾಗಿ ಮಾಲ್‌ನಲ್ಲಿದ್ದ 100ಕ್ಕೂ ಹೆಚ್ಚು ಬಟ್ಟೆ ಹಾಗೂ ಗೃಹೋಪಯೋಗಿ ಮಳಿಗೆಗಳು ಸಂಪೂರ್ಣ ಭಸ್ಮವಾಗಿವೆ.

ಅದೃಷ್ಟವಶಾತ್ ಪಾರು: ಮಾಲ್‌ನ ಕೆಳಮಹಡಿಯಲ್ಲಿ ವಾಸವಿದ್ದ ಸೆಕ್ಯೂರಿಟಿ ಗಾರ್ಡ್ ಸೋಮಶೇಖರ್ ಹಾಗೂ ಈರುಬಾಯಿ ದಂಪತಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು.


Spread the love

Leave a Reply

Your email address will not be published. Required fields are marked *