ಮಂಟೂರಿನಲ್ಲೂ ಗಾಂಜಾ ಪತ್ತೆ: ಬೈಕ್ ಸಮೇತ ಸಿಕ್ಕು ಬಿದ್ದ ಆರೋಪಿ

ಹುಬ್ಬಳ್ಳಿ: ಅಕ್ರಮವಾಗಿ ನಡೆಯುತ್ತಿರುವ ನಸೆಯ ದಂಧೆ ಹಳ್ಳಿ-ಹಳ್ಳಿಗೂ ತಲುಪುತ್ತಿದೇಯಾ ಎಂಬ ಸಂಶಯ ಆರಂಭವಾಗಿದ್ದು, ಮಂಟೂರ-ಭಂಡಿವಾಡ ರಸ್ತೆಯಲ್ಲಿ ಓರ್ವನನ್ನ ಬಂಧನ ಮಾಡಲಾಗಿದ್ದು, ಬೈಕ್ ಸಮೇತ ಗಾಂಜಾ ದೊರೆತಿದೆ.
ಮಂಟೂರ ಗ್ರಾಮದ ಪುಂಡಲೀಕ ಬಸಪ್ಪ ಸಾವಳಗಿ ಎಂಬಾತನೇ ಪೊಲೀಸರಿಗೆ ಸಿಕ್ಕು ಬಿದ್ದಿದ್ದು, ಆರೋಪಿಯೊಂದಿಗೆ 496ಗ್ರಾಂ ಗಾಂಜಾ ಹಾಗೂ ಸಾಗಾಟ ಮಾಡಲು ಬಳಕೆ ಮಾಡುತ್ತಿದ್ದ ಬೈಕ್ ನ್ನ ವಶಕ್ಕೆ ಪಡೆಯಲಾಗಿದೆ.
ಪಿಎಸೈ ಮಂಜುಳಾ ಸದಾರಿ ನೇತೃತ್ವದಲ್ಲಿ ಆರೋಪಿಯನ್ನ ಪತ್ತೆ ಹಚ್ಚಲಾಗಿದೆ. ಗ್ರಾಮೀಣ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಮುಖ ವ್ಯಕ್ತಿಯಾಗಿರುವ ಪುಂಡಲೀಕ, ಯಾವ ಯಾವ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಅಪರಾಧ ವಿಭಾಗದ ಠಾಣೆ ಪೊಲೀಸರು ಈಗಾಗಲೇ ಎರಡು ಪ್ರಕರಣಗಳನ್ನ ಬೇದಿಸಿ ನಾಲ್ವರನ್ನ ಬಂಧನ ಮಾಡಲಾಗಿತ್ತು. ಈಗ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲೂ ಓರ್ವ ಸಿಕ್ಕಿಬಿದ್ದಿದ್ದು, ಎರಡೇ ದಿನದಲ್ಲಿ ಮೂರು ಪ್ರಕರಣಗಳು ಐವರು ಆರೋಪಿಗಳು ಬಂಧನವಾದಂತಾಗಿದೆ.