ಹುಬ್ಬಳ್ಳಿ ರಸ್ತೆಯಲ್ಲಿ ಪಂಜಾಬಿ ಡ್ರೈವರಗಳ ಆಟಾಟೋಪ: ಆತಂಕದಲ್ಲಿ ಬೈಕ್ ಸವಾರರು…!

ಹುಬ್ಬಳ್ಳಿ: ಪಂಜಾಬ ಮೂಲದ ಲಾರಿ ಚಾಲಕನೋರ್ವ ಕುಡಿದ ಅಮಲಿನಲ್ಲಿ ವಾಹನವನ್ನ ಯದ್ವಾತದ್ವಾ ಚಲಾಯಿಸಿ, ಹಲವರಲ್ಲಿ ಆತಂಕ ಮೂಡಿಸಿ ಕೊನೆಗೆ ಪೊಲೀಸರನ್ನೂ ಹೊಡೆಯುವುದಕ್ಕೆ ಮುಂದಾಗಿದ್ದ ಘಟನೆ ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೊಟೇಲ್ ಬಳಿ ನಡೆದಿದೆ.
ಧಾರವಾಡದಿಂದ ಬರುತ್ತಿದ್ದ ಲಾರಿಯು ಬೈರಿದೇವರಕೊಪ್ಪದಿಂದ ಬೈಕ್ ಸವಾರರಿಗೆ ಕಿರಿಕಿರಿ ಮಾಡುತ್ತಲೇ ಬರುತ್ತಿದ್ದಾಗ, ಪ್ರೆಸಿಡೆಂಟ್ ಹೊಟೇಲ್ ಬಳಿ ಪೊಲೀಸರು ತಡೆದಿದ್ದಾರೆ. ಆಗ ಲಾರಿ ಚಾಲಕ ಗೌರವ್ ಎಂಬಾತ, ಅವರ ಮೇಲೆ ಹಲ್ಲೆ ಮಾಡುವ ಯತ್ನ ಮಾಡಿದ್ದಾನೆಂದು ಹೇಳಲಾಗಿದೆ.
ಸಾರ್ವಜನಿಕರು ಹಾಗೂ ಹೋಂ ಗಾರ್ಡಗಳು ಅವರನ್ನ ತಡೆದು, ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟೇಲ್ಲ, ನಡೆಯುತ್ತಿದ್ದಾಗಲೂ ಕುಡಿದ ಮತ್ತಿನಲ್ಲಿದ್ದ ಚಾಲಕ ‘ನಾನು ಪಂಜಾಬಿನ ಗೌರವ ಕೇಳುತ್ತಿದ್ದೇನೆ’ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದ.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಕುಡಿದ ನಸೆಯಲ್ಲಿ ವಾಹನ ಚಲಾವಣೆ ಮಾಡಿದ್ದರಿಂದ ವಿದ್ಯಾನಗರ ಠಾಣೆ ಪೊಲೀಸರು ವಾಹನವನ್ನ ವಶಕ್ಕೆ ಪಡೆದು, ಚಾಲಕನನ್ನ ಸುಪರ್ಧಿಗೆ ಪಡೆದಿದ್ದಾರೆ. ತಡರಾತ್ರಿ ಈ ಘಟನೆ ಕೆಲಕಾಲ ರಸ್ತೆ ಸಂಚಾರಕ್ಕೂ ಮುಳವಾಗಿತ್ತು.