“ಕಿಮ್ಸನಲ್ಲಿ ಮಗುವಿನ ಕಳ್ಳತನವೇ ನಡೆದಿಲ್ಲ”- ಹೆತ್ತವ್ವಳೇ ವಿಲನ್…!? Big Exclusive Story

ಹುಬ್ಬಳ್ಳಿ: ರಾಜ್ಯದ ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನವಾಗಿದೆ ಎಂದು ಫುಕಾರು ಎಬ್ಬಿಸಿದ್ದ ಅಸಲಿಯತ್ತನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕವಾಯ್ಸ್.ಕಾಂ ಅದರ ರಿವೀಲ್ ಮಾಡ್ತಿದೆ.
ಪ್ರಕರಣದ ಬಗ್ಗೆ ಮಗು ಕಳ್ಳತನವಾದ ದಿನ ಹಾಗೂ ಮಗು ಸಿಕ್ಕ ದಿನ ಹಡೆದವ್ವ ಮಾತಾಡಿದ್ದನ್ನ ಕೇಳಿ ಮತ್ತೂ ಆ ಮಹಾನ್ ತಾಯಿಯ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ.
ಹುಬ್ಬಳ್ಳಿಯ ಕಿಮ್ಸನಲ್ಲಿನ 103 ರಲ್ಲಿದ್ದ ತನ್ನ ಮಗಳನ್ನ ಕಸಿದುಕೊಂಡು ಹೋದರೆಂದು ಕಥೆ ಕಟ್ಟಿ ಹೇಳಿದ್ದಳು ಮಗುವಿನ ತಾಯಿ ಸಲ್ಮಾ. ಇದಾದ ನಂತರ ಮಗು ಆವರಣದಲ್ಲಿ ಸಿಕ್ಕಿತ್ತು. ಅದಾದ ತಕ್ಷಣವೇ ಓಡೋಡಿ ಬಂದು ಮಗುವಿನ ಅವ್ವ-ಅಪ್ಪ ಪೊಲೀಸರಿಗೆ ಧನ್ಯವಾದ ಹೇಳಿ, ಕಥೆಗೆ ದಿ ಎಂಡ್ ಹೇಳಿಕೊಂಡಿದ್ದರು.
ಪೊಲೀಸರು ಮಾತ್ರ ಸುಮ್ಮನೆ ಕೂಡಲಿಲ್ಲ. ತನಿಖೆ ಆರಂಭಗೊಂಡಾಗ ಅಸಲಿ ವಿಲನ್ ತಾಯಿಯೇ ಎಂದು ಹೇಳಲಾಗುತ್ತಿದೆ. ತನಗೆ ಹುಟ್ಟಿದ ಮಗುವಿನ ತಲೆ ಅತಿಯಾಗಿ ದೊಡ್ಡದಿದ್ದು, ಅದನ್ನ ತಾನೇ 103 ವಾರ್ಡಿನ ಶೌಚಾಲಯದ ಪಕ್ಕದ ಕಿಡಕಿಯಿಂದ ಹೊರಗೆ ಒಗೆದಿದ್ದಾಳೆ. ಅದೃಷ್ಟವಶಾತ್ ಮಗು ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿ, ಪೊಲೀಸರ ಕೈಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ತನ್ನದೇ ಕರುಳು ಬಳ್ಳಿಯನ್ನ ಕೊಲೆ ಮಾಡಲು ಯತ್ನಿಸಿ, ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಿರುವಳೆನ್ನಲಾದ ರಕ್ಕಸಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.