ಹುಬ್ಬಳ್ಳಿ: ಕ್ಲಾಸ್ ಒನ್ ಕಂಟ್ರಾಕ್ಟರ್‌ನ್ನ ಅಪಹರಿಸಿದ್ದ “ಸಬ್ ಕಂಟ್ರಾಕ್ಟರ್”- ಸಾಥ್ ನೀಡಿದ್ದ ಗೌಂಡಿ, ಮೇಸ್ತ್ರಿಗಳು…!!!

ಹುಬ್ಬಳ್ಳಿ: ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ತೋಳನಕೆರೆ ಸಮೀಪದಲ್ಲಿ ಗುತ್ತಿಗೆದಾರನನ್ನ ಅಪಹರಣ ಮಾಡಿದ್ದು, ಸಬ್ ಕಂಟ್ರ್ಯಾಕ್ಟರ ಟೀಂ ಎಂಬುದನ್ನ ಪತ್ತೆ ಹಚ್ಚಿರುವ ಪೊಲೀಸರು ಬರೋಬ್ಬರಿ ಹತ್ತು ಜನರನ್ನ ಬಂಧಿಸಿದ್ದಾರೆ.
ಗುತ್ತಿಗೆದಾರ ಮೋಹನ ಚವ್ಹಾಣ ಎಂಬುವವರನ್ನ ಉಪ ಗುತ್ತಿಗೆ ಪಡೆದಿದ್ದ ಬಸಪ್ಪ ದಳವಾಯಿ ಟೀಂ ಅಪಹರಣ ಮಾಡಿತ್ತು. ಈಗ ಎಲ್ಲರೂ ಅಂದರ್ ಆಗಿದ್ದಾರೆ. ಈ ಕುರಿತು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ಇಲ್ಲಿದೆ ನೋಡಿ.
ಹುಬ್ಬಳ್ಳಿಯ ಸಬ್‌ಜೈಲ್ ಗುತ್ತಿಗೆಯ ವ್ಯವಹಾರ ಅಲ್ಲಿಯೇ ಇರುವಂತೆ ಮಾಡಿರುವುದು ಸೋಜಿಗ. ಆರೋಪಿ ಬಸಪ್ಪ ದಳವಾಯಿ ಚವ್ಹಾಣ ಬ್ರದರ್ಸ್ ಬಗ್ಗೆ ಮೊದಲಿಂದಲೂ ಇರ್ಷೆ ಹೊಂದಿದ್ದನೆಂಬುದು ಕೂಡಾ ಬೆಳಕಿಗೆ ಬಂದಿದೆ.