Posts Slider

Karnataka Voice

Latest Kannada News

ಕೊಲೆ ಮಾಡಲು ಮುಂದಾಗಿದ್ದ ‘ಕೆರಿವಂಡಿ’ ಯವರ ಸಮೇತ ಐವರ ಬಂಧನ…!

1 min read
Spread the love

ಹುಬ್ಬಳ್ಳಿ: ತಾಯಿಯ ಹೆಸರಿನಲ್ಲಿ ಆಸ್ತಿಯನ್ನ ಬರೆದುಕೊಂಡು ಮಗನ ಕೊಲೆ ಮಾಡಲು ಮುಂದಾಗಿದ್ದು ಆರೋಪಿಗಳನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋಪನಕೊಪ್ಪ ಸ್ವಾಗತ ಕಾಲನಿ ನಿವಾಸಿಯಾಗಿದ್ದ ವಿರೇಶ ಶಶಿಧರ ಹೆಗಡಾಳ ಎಂಬುವವರೇ ತಲ್ವಾರನಿಂದ ಹೊಡೆದು ಕೊಲೆ ಮಾಡಲು ಮುಂದಾಗಿದ್ದ ಐವರನ್ನ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನ ನಾಗಶೆಟ್ಟಿಕೊಪ್ಪ ಕೆರಿವಂಡಿಯ ಅಲ್ತಾಫ ಮಹ್ಮದಲಿ ಬೇಪಾರಿ, ಮುನ್ನಾ ಮಹ್ಮದಲಿ ಬೇಪಾರಿ, ಬಸವೇಶ್ವರ ಪಾರ್ಕಿನ ಶ್ರೀನಿವಾಸ ದಲಭಂಜನ, ಜಾವೇದ ತಾಳಿಕೋಟೆ, ಇಮ್ರಾನ್ ತಾಳಿಕೋಟೆ ಹಾಗೂ ಮಂಜುನಾಥ ಬಾನಪ್ಪನವರ ಎಂದು ಗುರುತಿಸಲಾಗಿದೆ.

ಇವರಿಂದ ಹಲ್ಲೆಗೊಳಗಾಗಿರುವ ವಿರೇಶ ಹೆಗಡಾಳ, ಗಂಭೀರವಾಗಿ ಗಾಯಗೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ವಿಷಮವಾಗಿದೆ. ಆರೋಪಿಗಳನ್ನ ಹಿಡಿಯುವಲ್ಲಿ ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿನ ಪಿಎಸ್ಐ ಬಾಬಾ, ಸಿಬ್ಬಂದಿಯವರಾದ ಎಂ.ಡಿ.ಕಾಲವಾಡ, ಎಚ್.ಎಂ.ಗುಳೇಶ, ಆರ್.ಪಿ.ಕೆಂದೂರ, ಆರ್.ಎಲ್.ರಾಠೋಡ, ಎಚ್.ಆರ್.ರಾಮಾಪುರ, ವಿರುಪಾಕ್ಷಿ ಅಳಗವಾಡಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed