ಹುಬ್ಬಳ್ಳಿ-‘ಬ್ರೇನ್ ಹ್ಯಾಮ್ರೇಜ್’ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸಾವು
ಹುಬ್ಬಳ್ಳಿ: ತಾಲೂಕಿನ ಹಳ್ಯಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕರೋರ್ವರು ಬ್ರೇನ್ ಹ್ಯಾಮ್ರೇಜನಿಂದ ಸಾವಿಗೀಡಾದ ಘಟನೆ ಖಾಸಗಿ ಆಸ್ಪತ್ರೆಯಲ್ಲಿಂದು ನಡೆದಿದೆ.
ಹಲವು ವರ್ಷಗಳಿಂದ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಬಸೀರಅಹ್ಮದ ಖಾಜಿ ಎಂಬ ಶಿಕ್ಷಕರು ಬೆಳಿಗ್ಗೆ ತಲೆ ಸುತ್ತುತ್ತಿದೆ ಎಂದು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಇದು ಬ್ರೈನ್ ಹ್ಯಾಮರೇಜ್ ಎಂದು ಗೊತ್ತಾಗಿದೆ. ಚಿಕಿತ್ಸೆ ಫಲಿಸದೇ ಖಾಜಿ ನಿಧನರಾಗಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆಯ ಹಂಸಬಾವಿ ಗ್ರಾಮದ ಬಸೀರಅಹ್ಮದ ಖಾಜಿ, ಬಿಡನಾಳದ ನೀಲಗುಂದ ಪ್ಲಾಟನಲ್ಲಿ ವಾಸ ಮಾಡುತ್ತಿದ್ದರು. ಮೂವರು ಮಕ್ಕಳನ್ನ ಹೊಂದಿದ್ದ, ಮುಖ್ಯೋಪಾದ್ಯಾಯ ಖಾಜಿ, ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ. ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಜಿಲ್ಲಾ ಘಟಕಗಳ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಸೂಚಿಸಿದ್ದಾರೆ.