ಹರ್ಷ ಕಾಂಪ್ಲೆಕ್ಸನಲ್ಲಿ ಮಾರಾಮಾರಿ-ಓರ್ವ ಕಿಮ್ಸಗೆ ದಾಖಲು..!

ಹುಬ್ಬಳ್ಳಿ: ನಗರದ ಬಂಡಿವಾಡಅಗಸಿಯ ಬಳಿಯಿರುವ ಹರ್ಷ ಕಾಂಪ್ಲೆಕ್ಸ್ ನಲ್ಲಿ ಕುಡಿದ ಮತ್ತಿನಲ್ಲಿ ಯುವಕನನ್ನ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡು ಕಿಮ್ಸಗೆ ದಾಖಲಾದ ಘಟನೆ ನಡೆದಿದೆ.

ರಂಗಪಂಚಮಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಕಾವಲು ಹಾಕಿದ್ದರೂ ಕೂಡಾ ಕಿಡಿಗೇಡಿಗಳ ಪಟಾಲಂವೊಂದು, ಸಾಗರ ಎಂಬ ಯುವಕನಿಗೆ ಥಳಿಸಿದೆ. ಬಣ್ಣದಾಟವಾಡುತ್ತ ಮೇಲೆರಗಿದ ಯುವಕನಿಗೆ, ಯಾವ ಕಾರಣಕ್ಕೆ ಹೊಡೆದಿದ್ದಾರೆಂಬುದು ಗೊತ್ತಾಗಿಲ್ಲ.
ತೀವ್ರ ಥರದ ನೋವಿನಿಂದ ಬಳಲುತ್ತಿದ್ದ ಸಾಗರ ಎಂಬ ಯುವಕನನ್ನ ಕಿಮ್ಸಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹರ್ಷ ಕಾಂಪ್ಲೆಕ್ಸನಲ್ಲಿ ನಡೆದ ಘಟನೆಯಲ್ಲಿ 20ಕ್ಕೂ ಹೆಚ್ಚು ಯುವಕರು ದಾಂಧಲೆ ಮಾಡಿದ್ದಾರೆಂದು ಹೇಳಲಾಗಿದೆ.
ಶಹರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಗರನಿಂದಲೂ ವಿವರವನ್ನ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ.