ಹುಬ್ಬಳ್ಳಿ: ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಬೆತ್ತಲೆಗೊಳಿಸಿ ಥಳಿತ…!!!
ಹುಬ್ಬಳ್ಳಿ: ವಿವಾಹಿತ ಮಹಿಳೆ ಜೊತೆ ಮಾತಾಡಿದ್ದಕ್ಕೆ ಬೆತ್ತಲೆ ಮಾಡಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಗಂಭೀರವಾಗಿ ಹಲ್ಲೆ ಮಾಡಿರುವ ಪ್ರಕರಣ ಹುಬ್ಬಳ್ಳಿಯ ಕಸಬಾ ಪೇಟೆಯಲ್ಲಿ ಸಂಭವಿಸಿದೆ.
ಕಸಬಾಪೇಟೆ ಪೊಲೀಸ್ ಠಾಣೆಯ ಪಕ್ಕದ ಟಿಪ್ಪು ನಗರದಲ್ಲಿ ನಡೆದ ಘಟನೆ ನಡೆದಿದ್ದು, ಮುಜಾಫೀರ್ ಅನ್ನೋ ಯುವಕನನ್ನ ಬೆತ್ತಲೆ ಮಾಡಿ ಹಲ್ಲೆ ಮಾಡಲಾಗಿದೆ.
ವೀಡಿಯೋ…
ಅಪಹರಣ ಮಾಡಿ ಮುಜಾಫೀರ್‌ನನ್ನ ಬೆತ್ತಲೆ ಮಾಡಿ ಮಹಿಳೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ನಿನ್ನೆ ಮಹಿಳೆ ಜೊತೆ ಫೋನ್‌ನಲ್ಲಿ ಮುಜಾಫಿರ್ ಮಾತನಾಡಿದ್ದ. ಈ ವಿಷಯ ತಿಳಿದ ಕೂಡಲೇ ಮುಜಾಫೀರ್‌ನನ್ನ ಅಪಹರಿಸಿ ಥಳಿಸಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ.
ಸಿಕ್ಕ ಸಿಕ್ಕಲ್ಲಿ ಬ್ಲೇಡ್ ಸಂಬಂಧಿಕರು ಬ್ಲೇಡ್ ಹಾಕಿದ್ದು, ಗಾಯಗೊಂಡ ಮುಜಾಫೀರ್ ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊಹಮದ್, ಮಾಬುಲಿ,ಮಲೀಕ್,ಮೈನು ಶಗರಿ, ನದೀಮ್, ಸಮೀರ್ ಸೇರಿ ಹತ್ತು ಹದಿನೈದು ಜನರಿಂದ ಹಲ್ಲೆ ನಡೆದಿದ್ದು,
ಕಸಬಾಪೇಟೆ ಪೊಲೀಸರು ಮುಂದಿನ ಕ್ರಮ ಜರುಗಿಸಬೇಕಿದೆ.