ಹುಬ್ಬಳ್ಳಿಯ ವಿದ್ಯಾನಗರದಲ್ಲಿ “ಚಿನ್ನದ ಬೇಟೆ”- Exclusive Video…

ಹುಬ್ಬಳ್ಳಿ: ಖಾಸಗಿ ಬಸ್ಸಿನ ಮೂಲಕ ಬರುತ್ತಿದ್ದ ಭಾರೀ ಮೊತ್ತದ ಚಿನ್ನವನ್ನ ಹಿಡಿಯುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆಂದು ಹೇಳಲಾಗಿದ್ದು, ಕಾರ್ಯಾಚರಣೆಯ ವೀಡಿಯೋ ವೈರಲ್ ಆಗಿದೆ.
ಮೊದಲು ಈ ವೀಡಿಯೋ ನೋಡಿ…
ಸೋಹನದಾನ್ ಎಂಬಾತ ಚಿನ್ನವನ್ನ ಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ರಹಸ್ಯ ಕಾರ್ಯಾಚರಣೆ ನಡೆದಿದೆ. ಮಹಾವೀರ ಕೋರಿಯರ್ ಸರ್ವೀಸ್ ಹೆಸರಿನಲ್ಲಿ ಚೀಲ ಬಂದಿತ್ತೆಂದು ಹೇಳಲಾಗಿದೆ.
ಚಿನ್ನದ ಆಭರಣವನ್ನ ಮಾಡಿಕೊಂಡು ಇಲ್ಲಿಗೆ ಬರುತ್ತಿರುವುದು ಬೆಳಕಿಗೆ ಬರುತ್ತಿದೆ. ಈಗ ಸಿಕ್ಕಿದೆ ಎನ್ನಲಾಗಿರುವ ಚಿನ್ನದ ಬಿಲ್ ಇದೇಯಾ ಅಥವಾ ಇಲ್ಲವೋ ಎಂಬುದು ವಿಚಾರಣೆಯಿಂದ ಹೊರಬರಬೇಕಿದೆ.