ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ “ನಾಳೆ” ಗಾಯತ್ರಿ ಇಂಡಸ್ಟ್ರೀಸ್ ಉದ್ಘಾಟನೆ…
1 min readಹುಬ್ಬಳ್ಳಿ: ಸಿರಿ ಧಾನ್ಯಗಳಿಂದ ತಯಾರಿಸಿದ ವಿನೂತನ ಉತ್ಪನ್ನಗಳ ಬಿಡುಗಡೆ ಹಾಗೂ ಗಾಯತ್ರಿ ಇಂಡಸ್ಟ್ರೀಸ್ ನ ಉದ್ಘಾಟನೆ ನಾಳೆ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ಪ್ಯಾಕ್ಟರಿಯಲ್ಲಿ ನಡೆಯಲಿದೆ.
ಆಧುನಿಕತೆಯ ಭರಾಟೆಯಲ್ಲಿ ಪುರಾತನ ಆಹಾರ ಪದ್ಧತಿಯನ್ನ ಮರೆಯಲಾಗುತ್ತಿದೆ. ಅದನ್ನ ಮತ್ತೆ ದೇಶದ ಜನತೆಗೆ ಪರಿಚಯಿಸುವ ಉದ್ದೇಶವನ್ನ ಗಾಯತ್ರಿ ಇಂಡಸ್ಟ್ರೀಸ್ ಹೊಂದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತದ ಸಹ ಸಂಘಚಾಲಕರಾದ ಅರವಿಂದರಾವ್ ದೇಶಪಾಂಡೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಸಂಸ್ಕರಿತ ಆಹಾರಗಳ ಕೇಂದ್ರದ ನಿರ್ದೇಶಕ ಚೇತನ ಹಂಚಾಟೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗಾಯತ್ರಿ ಇಂಡಸ್ಟ್ರೀಸ್ ವತಿಯಿಂದ ‘ಮೇಕ್ ಇಟ್ ಈಜೀ’ ಹೆಸರಿನಡಿ ಐದು ಪ್ರಮುಖ ಸಿರಿಧಾನ್ಯಗಳ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನ ಗಾಯತ್ರಿ ಇಂಡಸ್ಟ್ರೀಸ್ ನ ಸಿಇಓ ಪ್ರಸನ್ನ ಅನಂತಾಚಾರ್ಯ ಕಟ್ಟಿ, ಪೂಜಾ ಕಟ್ಟಿ, ಸಂಗೀತಾ ಮತ್ತು ಜಯತೀರ್ಥ ಕಟ್ಟಿ ಅವರು ನೀಡಿದ್ದಾರೆ.