ಹುಬ್ಬಳ್ಳಿಯಲ್ಲಿ ಮತ್ತೆ ಅರ್ಧ ಕೆಜಿ ಗಾಂಜಾ ಪತ್ತೆ- ಇಬ್ಬರ ಬಂಧನ

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಗಾಂಜಾ ವ್ಯವಹಾರ ದಿನಕ್ಕೊಂದು ಬೆಳಕಿಗೆ ಬರುತ್ತಿದ್ದು, ಇಂದು ಕೂಡಾ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ನೂರಅಹ್ಮದ ಹಾಗೂ ಅಕ್ಷಯ ವೇರ್ಣೆಕರ ಬಂಧಿತ ಆರೋಪಿಗಳಾಗಿದ್ದು, ನಗರದ ಪ್ರಮುಖ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರೆಂದು ಗೊತ್ತಾಗಿದೆ.
ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯವರು ನಿನ್ನೆಯಷ್ಟೇ ಇಬ್ಬರನ್ನ ಪತ್ತೆ ಹಚ್ಚಿದ್ದರು. ನಿನ್ನೆ ತಿಮ್ಮಸಾಗರದ ಟಿಸ್ಸ್ ಅಲಿಯಾಸ್ ವಿಶ್ವನಾಥ ಮಲ್ಲಪ್ಪ ಕರಡಿಗುಡ್ಡ ಹಾಗೂ ಮಂಟೂರ ರಸ್ತೆಯ ನರೇಶಕುಮಾರ ರಾಜನ್ನ ನಾಯಕಂಟಿ ಎಂಬಿಬ್ಬರನ್ನ ಪೊಲೀಸರು ಹಿಡಿದು ಅವರಿಂದ 1ಕೆಜಿ 795 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದಿದ್ದರು.
ಇಂದು ಮತ್ತೆ ಇಬ್ಬರನ್ನ ಬಂಧಿಸುವ ಮೂಲಕ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.
ಠಾಣೆಯ ಇನ್ಸ್ ಪೆಕ್ಟರ್ ಎನ್.ಸಿ.ಕಾಡದೇವರಮಠ, ಸಿಬ್ಬಂದಿಗಳಾದ ಬಿ.ಕೆ.ಹೂಗಾರ, ಸಿ.ಎಂ.ಕಂಬಾಳಿಮಠ, ರವಿ ಕೋಳಿ, ಎಂ.ಡಿ.ಬಡಿಗೇರ, ವೈ.ಎಫ್.ದಾಸಣ್ಣನವರ, ಪಿ.ಬಿ.ಹಿರಗಣ್ಣನವರ, ಮೋಹನ ಈಳಿಗೇರ, ರಾಕೇಶ ಗೋರ್ಕಲ ಇಂದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.