ಹುಬ್ಬಳ್ಳಿ: ಗಾಂಜಾ ಪತ್ತೆ-ಆಟೋಚಾಲಕರೇ ಆರೋಪಿಗಳು
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಗಾಂಜಾ ದಾಳಿ ಮುಂದುವರೆದಿದ್ದು, ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಮತ್ತೀಬ್ಬರನ್ನ ಬಂಧನ ಮಾಡಿ, ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ಕಾರವಾರ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ವಿಜಯಪುರ ಶಾಸ್ತ್ರೀನಗರದ ಆಟೋ ಚಾಲಕ ಮೈನುದ್ಧೀನ ಮೀರಾಸಾಬ ಶೇಖ ಮತ್ತು ಹಳೇಹುಬ್ಬಳ್ಳಿ ಈಶ್ವರನಗರದ ಆಟೋಚಾಲಕ ಸಾಧೀಕ ನರಗುಂದ ಬಂಧಿತರಾಗಿದ್ದು, ಆರೋಪಿಗಳಿಂದ 1ಕೆಜಿ 200 ಗ್ರಾಂ ಗಾಂಜಾ ಮತ್ತು 2 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ಸಪೆಕ್ಟರ್ ಎನ್.ಸಿ.ಕಾಡದೇವರಮಠ ನೇತೃತ್ವದಲ್ಲಿ ಪಿಎಸೈಗಳಾದ ರಾಘವೇಂದ್ರ ಗುರ್ಲ, ಎಸ್.ಜಿ.ಕಾನಟ್ಟಿ ಸಿಬ್ಬಂದಿಗಳಾದ ಸಿ.ಎಂ.ಕಂಬಾಳಿಮಠ, ಎಸ್.ಎಂ.ಕುರಹಟ್ಟಿ, ಸಿ.ಡಿ.ಬೆಳ್ಳಕ್ಕಿ, ಎ.ಎಂ.ತಹಶೀಲ್ದಾರ, ಮಂಜುನಾಥ ಹಾಲವರ, ಫಕ್ಕೀರೇಶ ಗೊಬ್ಬರಗುಂಪಿ, ರವಿ ಕೋಳಿ, ಎಂ.ಡಿ.ಬಡಿಗೇರ, ಪಿ.ಕೆ.ಬಿಕ್ಕನಗೌಡರ, ಎಫ್.ವೈ.ಸುಣಗಾರ, ಬಿ.ಟಿ.ಪಶುಪತಿಹಾಳ, ಜಯಶ್ರೀ ಚಿಲ್ಲೂರ, ತಾಂತ್ರಿಕ ವಿಭಾಗದ ಮಲ್ಲಿಕಾರ್ಜುನ ಚಿಕ್ಕಮಠ, ಸೈಬರ್ ಕ್ರೈಂ ಠಾಣೆಯ ಪಿ.ಟಿ.ಹೆಗ್ಗಣ್ಣನವರ ದಾಳಿಯಲ್ಲಿ ಭಾಗವಹಿಸಿ ಇಬ್ಬರನ್ನೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.