1ಕೋಟಿ 87 ಲಕ್ಷ ರೂಪಾಯಿಯಲ್ಲಿ “ಐದೇ ಸಾವಿರ ಅಸಲಿ”- ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಹೊರಬಿತ್ತು ‘ನಕಲಿಯಾಟ’….

ಹುಬ್ಬಳ್ಳಿ: ಮಹಿಳೆಯೊಬ್ಬಳಿಗೆ ಕೋಟ್ಯಾಂತರ ರೂಪಾಯಿ ಬಡ್ಡಿ ಹಣ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದ ಆಸಾಮಿಯೋರ್ವ, ನಕಲಿ ನೋಟು ನೀಡಿ ವಂಚಿಸುತ್ತಿದ್ದ ಸಮಯದಲ್ಲಿ ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ನಕಲಿ ನೋಟಿನ ಜೊತೆಗೆ ಆರೋಪಿಯನ್ನ ಹೆಡಮುರಿಗೆ ಕಟ್ಟಿದ ಘಟನೆ ನಡೆದಿದೆ.
ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ಹೇಳಿ ಸಾಲದ ರೂಪದಲ್ಲಿ ನಕಲಿ ನೋಟುಗಳನ್ನು ನೀಡಿದ ಕಿರಾತಕನ ವಿರುದ್ಧ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಬಿಚ್ಚಿಟ್ಟ ಸತ್ಯ… ವೀಡಿಯೋ ಇಲ್ಲಿದೆ ನೋಡಿ…
ಪೂನಾ ಮೂಲದ ಅಶ್ವಿನಿ ಎಂಬುವವರಿಗೆ ಮೈಸೂರು ಮೂಲದ ಮೊಹಮ್ಮದ್ ಆಸೀಫ್ ಅಲಿಯಾಸ್ ಸುಧೀರ ಮೆಹ್ತಾ ಎಂಬಾತ ಮೋಸ ಮಾಡಿದ್ದಾನೆ.
ಅಶ್ವಿನಿಗೆ 50 ಕೋಟಿ ಕೊಡಿಸುವ ಆಸೆಯನ್ನ ಮೊಹಮ್ಮದ್ ಆಸೀಫ್ ತೋರಿಸಿದ್ದ. ಸುಧೀರ್ ಮೆಹ್ತಾ ಅಂತ ಹೆಸರು ಬದಲಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.
ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲೋನ್ ಮೊದಲ ಭಾಗ ಅಂತ 1 ಕೋಟಿ 87 ಲಕ್ಷ 45 ಸಾವಿರ ಹಣವನ್ನು ಅಶ್ವಿನಿಗೆ ನೀಡಿದ್ದ ಮೊಹಮ್ಮದ್
ಬಳಿಕ ಹಣ ಏಣಿಕೆ ಮಾಡುವಗ ನಕಲಿ ನೋಟು ಇರುವುದು ಪತ್ತೆ
1 ಕೋಟಿ 87 ಲಕ್ಷ 45 ಸಾವಿರ ಹಣದಲ್ಲಿ ಕೇವಲ ಐದು ಸಾವಿರ ಅಸಲಿ ನೋಟು
ಉಳಿದ ಹಣವೇಲ್ಲಾ ನಕಲಿ ನೋಟು
ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ತಿಂಗಳ 5 ರಂದು ಪ್ರಕರಣ ದಾಖಲಾಗಿತ್ತು..
ಆರೋಪಿ ಬೆನ್ನುಹತ್ತಿ ಮುರುಡೇಶ್ವರದಲ್ಲಿ ಬಂಧನ ಮಾಡಿದ ಹುಬ್ಬಳ್ಳಿ ಸಿಸಿಬಿ ಪೊಲೀಸರು
ಸದ್ಯ ಆರೋಪಿ ಮೊಹಮ್ಮದ್ ಬಂಧಿಸಿ ವಿಚಾರಣೆ
ತಮಿಳು ನಾಡಿನ ಪ್ರಿಂಟಿಂಗ್ ಪ್ರೆಸ್ ನಲ್ಲಿ ನೋಟು ಮುದ್ರಣ ಮಾಡಿರುವುದಾಗಿ ಬಾಯಿಬಿಟ್ಟ ಆರೋಪಿ
ಈ ಹಿಂದೆಯೂ 2017- 18 ನಕಲಿ ನೋಟು ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಮೊಹಮ್ಮದ್