ಹುಬ್ಬಳ್ಳಿ ಖೋಟಾ ನೋಟು ಪ್ರಕರಣ: ಆರೋಪಿಗಳನ್ನ ಕಸ್ಟಡಿಗೆ- ಪೊಲೀಸ್ ಕಮೀಷನರ್ ಲಾಬುರಾಮ್…
ಹುಬ್ಬಳ್ಳಿ: ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಆರೋಪಿಗಳನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಮತ್ತಷ್ಟು ಮಾಹಿತಿಯನ್ನ ಸಂಗ್ರಹಿಸಿ, ತನಿಖೆಯನ್ನ ಮುಂದುವರೆಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹೇಳಿದರು.
ಕಮೀಷನರ್ ಲಾಬುರಾಮ್ ಅವರ ಹೇಳಿಕೆ..
ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ನಾಲ್ವರನ್ನ ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಖೋಟಾ ನೋಟನ್ನ ವಶಕ್ಕೆ ಪಡೆದಿದ್ದಾರೆ. ಇವರು ಹುಬ್ಬಳ್ಳಿಯಲ್ಲಿ ನಾಲ್ಕೈದು ತಿಂಗಳಿಂದ ಈ ದಂಧೆಯನ್ನ ನಡೆಸುತ್ತಿದ್ದರೆಂದು ಗೊತ್ತಾಗಿದ್ದು, ಹಾಗಾಗಿ, ಆರೋಪಿಯನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗುವುದೆಂದು ಹೇಳಿದರು.
ಈಗಾಗಲೇ ಪ್ರಕರಣದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಹಿಂಭಾಗದ ಗುರುಶಿದ್ದೇಶ್ವರನಗರದ ಗೋಪಿನಾಥ ಹಬೀಬ, ಟಿಪ್ಪುನಗರ ಮಾಳೇಕಾರ ಪ್ಲಾಟನ ಶ್ರೀನಿವಾಸ ವಾಸಪ್ಪ ತಟ್ಟಿ, ದೇವರಗುಡಿಹಾಳದ ಮೌಲಾಸಾಬ ಮಕ್ತುಮಸಾಬ ಗುಡಿಹಾಳ ಹಾಗೂ ಹಳೇಹುಬ್ಬಳ್ಳಿ ಸದರಸೋಫಾ ಕೋಳೇಕರ ಪ್ಲಾಟನ ಸಲೀಂ ಇಮಾಮಸಾಬ ಮುಲ್ಲಾ ಬಂಧನ ಮಾಡಲಾಗಿದೆ ಎಂದರು. ಬಂಧಿತ ಗೋಪಿನಾಥ ಹಬೀಬ ನೋಟನ್ನ ಪ್ರಿಂಟ್ ಮಾಡಿ ಇನ್ನುಳಿದ ಆರೋಪಿಗಳಿಗೆ ಮಾರಾಟ ಮಾಡಲು ಹಚ್ಚುತ್ತಿದ್ದ. ಇದೇಲ್ಲವನ್ನೂ ಗಮನಿಸಿಯೇ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದೆಂದು ಪೊಲೀಸ್ ಕಮೀಷನರ್ ಲಾಬುರಾಮ್ ಅವರು ತಿಳಿಸಿದರು.